ಚುಟುಕು ಕವಿತೆಗಳು…

– ಕೆ. ಎಂ. ವಿರುಪಾಕ್ಶಯ್ಯ.

ಚುಟುಕು ಕವಿತೆಗಳು, Short poems

ಕೋಪವೆಂಬುದು ಬೆಂಕಿಯ ಉಂಡೆಯೆಂತೆ
ವೀವೇಚನೆಯಿಲ್ಲದ ಮಾತು ಬರೆ ಹಾಕಿದಂತೆ
ತಾಳ್ಮೆ ಇಲ್ಲದವನ ಸ್ನೇಹ ನಾಯಿಬಾಲದಂತೆ
ಈ ಗುಣಗಳಿದ್ದರೆ ನೀ ಬದುಕಿಯು ಸತ್ತಂತೆ

***

ಬದುಕು ಎಂಬ ಮೂರಕ್ಶರದ ಬಂಡಿಗೆ
ಆಸೆ ಎಂಬ ಎರಡಕ್ಶರದ ಎತ್ತನು ಕಟ್ಟಿ
ಚಿಂತೆಯೆಂಬ ದಾರಿಯಲಿ ಸಾಗುತಿರುವೆ
ಕಶ್ಟ ಎಂಬ ಬಿಸಿಲಲಿ ಬೆಂದಿರುವೆ
ಬದುಕ ಕಟ್ಟುವೆನೋ ಇಲ್ಲ ಮುಳುಗುವೆನೋ
ಒಂದು ತಿಳಿಯದೆ ಕುಳಿತಿರುವೆ

***

ಬೈಯದಿರು ಮಡದಿ ಮಕ್ಕಳ ಕೆಲಸದೊತ್ತಡದಿಂದ
ಚಿಂತಿಸದಿರು ಸಂಸಾರದ ಜಂಜಾಟಗಳಿಂದ
ಕೊರಗದಿರು ಸಂಬಂದಿಗಳ ಮಾತುಗಳಿಂದ
ಬದುಕ ನಡೆಸು ಒಳ್ಳೆಯ ಆಲೋಚನೆಗಳಿಂದ

***

ಏನಾದರೇನು ಜಗದೊಳಗೆ
ಮುಳುಗಿರುತ್ತೀರಿ ಜಂಗಮವಾಣಿಯೊಳಗೆ
ತಲೆಯತ್ತಿ ನಡೆಯದಾದಿರಿ ನಗರದೊಳಗೆ
ಕೊನೆಗೆ ದೇಹ ಮಣ್ಣಿನೊಳಗೆ

***

ಅರೆಕ್ಶಣದ ಕೋಪ ರಾಜ್ಯಗಳನ್ನೇ ಸುಟ್ಟಿತು
ಚಾಡಿ ಮಾತು ಸಂಸಾರವನ್ನೇ ಕೆಡಿಸಿತು
ಕುಲದ ಮಾತು ಮಾರಣಹೋಮವ ನಡೆಸಿತು
ನನ್ನ ಮನಸು ಹೀಗೆಂದು ಬರೆಯಿತು

{ ಚಿತ್ರ ಸೆಲೆ: pngtree.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: