ಗಿರ‍್ಮಿಟ್ ಮತ್ತು ಹುರಿದ ಹಸಿ ಮೆಣಸಿನ ಕಾಯಿ
– ಸವಿತಾ.
ಬೇಕಾಗುವ ಸಾಮಾನುಗಳು
- ಚುರುಮುರಿ (ಕಡಲೆಪುರಿ) – 3 ಬಟ್ಟಲು
- ಸೇವ್ – 2 ಬಟ್ಟಲು
- ಹಸಿ ಮೆಣಸಿನ ಕಾಯಿ – 1
- ಈರುಳ್ಳಿ – 3
- ಟೊಮೆಟೊ – 2
- ಹುರಿಗಡಲೆ ಪುಡಿ – 3 ಚಮಚ
- ಹುಣಸೆ ರಸ – 2 ಚಮಚ
- ಬೆಲ್ಲ – 2 ಚಮಚ
- ಎಣ್ಣೆ – 3 ಚಮಚ
- ಕರಿಬೇವು – 6-7 ಎಲೆ
- ಒಣ ಕಾರ – 2 ಚಮಚ
- ಹುರಿದ ಹಸಿ ಮೆಣಸಿನ ಕಾಯಿ – 4
- ಸಾಸಿವೆ, ಜೀರಿಗೆ – 1/2 ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಗಿರ‍್ಮಿಟ್ ಮಾಡುವ ವಿದಾನ
ಈರುಳ್ಳಿ, ಟೊಮೆಟೊ, ಹಸಿ ಮೆಣಸಿನ ಕಾಯಿ ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಎಣ್ಣೆ ಕಾಯಿಸಿ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ಸಿಡಿಯಲು ಶುರುವಾದ ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೊ ಹಾಕಿ ಕಲಸಿ. ರುಚಿಗೆ ತಕ್ಕಶ್ಟು ಉಪ್ಪು, ಚಿಟಿಕೆ ಅರಿಶಿಣ, ಒಣ ಕಾರ ಮತ್ತು ಹುರಿಗಡಲೆ ಪುಡಿ ಸೇರಿಸಿ, ಹುಣಸೆ ರಸ ಮತ್ತು ಬೆಲ್ಲ ಹಾಕಿ ಸ್ವಲ್ಪ ಕುದಿಸಿ ತೆಗೆದಿಟ್ಟುಕೊಳ್ಳಿ. ಈ ಮಸಾಲೆ ಆರಿದ ಮೇಲೆ ಚುರುಮುರಿ ಹಾಕಿ ಕಲಸಿ. ಈರುಳ್ಳಿ, ಟೊಮೆಟೊ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.
ಹುರಿದ ಹಸಿ ಮೆಣಸಿನ ಕಾಯಿ ಮಾಡುವ ಬಗೆ
ನಾಲ್ಕು ಹಸಿ ಮೆಣಸಿನ ಕಾಯಿ ಮದ್ಯ ಸೀಳಿ, ಬೀಜ ತೆಗೆದು ಇಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಜೀರಿಗೆ, ಉಪ್ಪು ಪುಡಿ ಮಾಡಿ ತುಂಬಿ. ಎಣ್ಣೆಯಲ್ಲಿ ಹುರಿದು ತೆಗೆದರೆ ಗಿರ‍್ಮಿಟ್ ಜೊತೆ ನೆಂಚಿಕೊಳ್ಳಲು ಹುರಿದ ಹಸಿ ಮೆಣಸಿನ ಕಾಯಿ ಸಿದ್ದ.
ತಿನ್ನಲು ನೀಡುವಾಗ ಗಿರ‍್ಮಿಟ್ ಮೇಲೆ ಸ್ವಲ್ಪ ಸಣ್ಣ ಸೇವ್ ಹಾಕಿ. ಜೊತೆಗೆ ನೆಂಚಿಕೊಳ್ಳಲು ಹುರಿದ ಹಸಿ ಮೆಣಸಿನ ಕಾಯಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ.
(ಚಿತ್ರ ಸೆಲೆ: ಸವಿತಾ)
ಇತ್ತೀಚಿನ ಅನಿಸಿಕೆಗಳು