ಒಂದಲ್ಲ ಒಂದು ದಿವಸ ಬಂದೇ ಬಂದಾನು

– ಅಶೋಕ ಪ. ಹೊನಕೇರಿ.

ಅನುದಿನವೂ ದಿನಕರನ
ಆಗಮನಕೆ ಆನಂದ…
ತುಂದಿಲಳಾಗುತ್ತೇನೆ

ಎಂದೋ ಮರೆಯಾಗಿ ಹೋದವನು
ಇಂದಾದರೂ ಬರುವನೆಂದು

ಆಹಾ! ಇಂದು ಬಂದೇ ಬಿಟ್ಟ
ಎಂದೂ ಬಾರದವ

ಬಂದು ಅಪ್ಪಿ ಮುದ್ದಾಡಿ
ಮುಂಗುರುಳನೇವರಿಸಿ
ಕಣ್ಣಲ್ಲಿ ಬೊಗಸೆ ತುಂಬ
ಪ್ರೀತಿ ತುಂಬಿಸಿ

ಪ್ರೇಮ ಸಿಂಚನದಲಿ ಮಿಂದೇಳುವಂತೆ
ಮಾಡಿದರೆ… ನನ್ನ ಆನಂದಕೆ
ಪಾರವೇ ಇಲ್ಲ
ನನ್ನ ಮನದಿನಿಯ

ಅಲ್ಲೆಲ್ಲೋ ಕುಯ್ ಗುಡುವ
ಸದ್ದು!? ಅರೇ ನಮ್ಮಿಬ್ಬರ
ನಡುವೆಯೇ… ನಮ್ಮೀ ಆನಂದದ
ಪ್ರೇಮದ ಈ ದಾರಿಯಲ್ಲಿ
ಇದೇನಿದು ಅಪಶಕುನ?

ಇಲ್ಲ, ಈ ಅಪಶಕುನವೇ ಸತ್ಯ
ಇದುವರೆಗೂ ಅಂದುಕೊಂಡದ್ದೆಲ್ಲ
ಬರೀ ಮಿತ್ಯ… ಬರೀ ಮಿತ್ಯ…
ನನ್ನ ಕನಸಿಗೂ ಸತ್ಯದಂತೆ
ಕಾಣೋ ಶಕ್ತಿ ಇದೆ

ಆದರೂ ನಿತ್ಯ ದಿನಕರನ
ಬರುವಿಕೆಯೊಡನೆ ಅವರ
ಬರುವಿಕೆಯೂ ಎದುರು
ನೋಡುತ್ತೇನೆ ನಾ ಶಬರಿಯಂತೆ.‌‌.

ಒಂದಲ್ಲ ಒಂದು ದಿವಸ
ಬಂದೇ ಬಂದಾನು
ಬೊಗಸೆ ತುಂಬ ಪ್ರೀತಿ
ತಂದಾನು

(ಚಿತ್ರ ಸೆಲೆ: eyewillnotcry.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: