ಒಗ್ಗರಣೆ ಮಜ್ಜಿಗೆ

ಒಗ್ಗರಣೆ ಮಜ್ಜಿಗೆ

ಸವಿತಾ.

ಒಗ್ಗರಣೆ ಮಜ್ಜಿಗೆ

ಏನೇನು ಬೇಕು?

  • 2 ಲೋಟ ಮಜ್ಜಿಗೆ
  • 2 ಚಮಚ ಎಣ್ಣೆ
  • 1/2 ಚಮಚ ಸಾಸಿವೆ
  • 1/2 ಚಮಚ ಜೀರಿಗೆ
  • 5-6  ಕರಿಬೇವು ಎಸಳು
  • 1/4 ಚಮಚ ಇಂಗು
  • ಸ್ವಲ್ಪ ಅರಿಶಿಣ
  • ಹಸಿ ಶುಂಟಿ
  • ಹಸಿ ಮೆಣಸಿನಕಾಯಿ ಪೇಸ್ಟ್ (1/4 ಇಂಚು ಹಸಿ ಶುಂಟಿ + 1 ಹಸಿ ಮೆಣಸಿನಕಾಯಿ)
  • ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ಬಗೆ

  • ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಸಿಡಿಸಿ ನಂತರ ಕರಿಬೇವು ಹಾಕಿ ಒಗ್ಗರಣೆ ಕೊಡಿ
  • ಹಸಿ ಶುಂಟಿ ಹಸಿ ಮೆಣಸಿನಕಾಯಿ ಪೇಸ್ಟ್, ಅರಿಶಿಣ, ಇಂಗು, ಉಪ್ಪು ಹಾಕಿ ಹುರಿದು ಆರಿಸಿ
  • ಸ್ವಲ್ಪ ತಣ್ಣಗಾದ ಮೇಲೆ ಮಜ್ಜಿಗೆಗೆ ಸೇರಿಸಿ.
  • ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿ.

ಒಗ್ಗರಣೆ ಮಜ್ಜಿಗೆ ಸವಿಯಲು ತಯಾರು. ಅನ್ನದ ಜೊತೆಗೂ ತೆಗೆದುಕೊಳ್ಳಬಹುದು.

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: