ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.

 

colors, ಬಣ್ಣಗಳು

ಇದು ಬಣ್ಣಗಳ ಲೋಕ ಗೆಳೆಯ
ಒಳ ಮರ‍್ಮವ ನೀ ತಿಳಿಯಾ

ಆಸೆಗೆ ನಿರಾಸೆಯ ಬಣ್ಣ
ಪ್ರೀತಿಗೆ ಮೋಸದ ಬಣ್ಣ
ಕೊಂಕಿಗೆ ಸಹನೆಯ ಬಣ್ಣ
ತ್ಯಾಗಕೆ ಮಮತೆಯ ಬಣ್ಣ
ಇದು ಬಣ್ಣಗಳ ಲೋಕ ಗೆಳೆಯ
ಒಳ ಮರ‍್ಮವ ನೀ ತಿಳಿಯಾ

ಹಸಿರು ಇಳೆಯಲಿ ಉಸಿರಿನ ಬಣ್ಣ
ನೀಲಿ ಮೇಗದಲಿ ಮಳೆಯ ಬಣ್ಣ
ಸಾಗರದೊಳಗೆ ಲವಣದ ಬಣ್ಣ
ಕಾನನದೊಳಗೆ ಬಯದ ಬಣ್ಣ
ಇದು ಬಣ್ಣಗಳ ಲೋಕ ಗೆಳೆಯ
ಒಳ ಮರ‍್ಮವ ನೀ ತಿಳಿಯಾ

ಸಾದನೆಗಿರಲಿ ಚಲದ ಬಣ್ಣ
ಸೋಲಿನ ಹಾದಿಗೆ ದೈರ‍್ಯದ ಬಣ್ಣ
ಜಯದ ಹೊಲಿಸಿಗೆ ನಗುವಿನ ಬಣ್ಣ
ಸರಳತೆಗೆಂದು ವಿನಯದ ಬಣ್ಣ
ಇದು ಬಣ್ಣಗಳ ಲೋಕ ಗೆಳೆಯ
ಒಳ ಮರ‍್ಮವ ನೀ ತಿಳಿಯಾ

(ಚಿತ್ರ: http://pavlusa.deviantart.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: