ಕಡು ಬಿಸಿಲಿಗೆ ತಂಪಾದ ಶುಂಟಿ ತಂಬುಳಿ

– ಕಲ್ಪನಾ ಹೆಗಡೆ.

ಶುಂಟಿ, ಅಂಬಲಿ, ತಂಬುಳಿ, ginger, tambuli, ambali

ಏನೇನು ಬೇಕು?

  • ಶುಂಟಿ – 1 ಚೂರು
  • ಕಾಳು ಮೆಣಸು – 2
  • ಹಸಿಮೆಣಸಿನಕಾಯಿ – 2
  • ಒಣಮೆಣಸಿನಕಾಯಿ – 1
  • ಮಜ್ಜಿಗೆ – 2 ಸೌಟು
  • ಕಾಯಿತುರಿ
  • ಜೀರಿಗೆ – ಅರ‍್ದ ಚಮಚ
  • ಕರಿಬೇವು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವುದು ಹೇಗೆ?

ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಶುಂಟಿ, ಹಸಿಮೆಣಸಿನಕಾಯಿ, ಕಾಳು ಮೆಣಸು, ಜೀರಿಗೆಯನ್ನು ಹಾಕಿ ಹುರಿದು ಮಿಕ್ಸಿಗೆ ಹಾಕಿಕೊಳ್ಳಿ. ಅದಕ್ಕೆ ಕಾಯಿ ತುರಿ, ಸ್ವಲ್ಪ ನೀರನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಮಾಡಿಕೊಳ್ಳಿ. ಆನಂತರ ಒಂದು ಪಾತ್ರೆಗೆ ಹಾಕಿ 2 ಸೌಟು ಮಜ್ಜಿಗೆ, ರುಚಿಗೆ ತಕ್ಕಶ್ಟು ಉಪ್ಪು, ಅದಕ್ಕೆ ತಗಲುವಶ್ಟು ನೀರು ಸೇರಿಸಿ ತೆಳ್ಳಗೆ ಹದ ಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ, ಕರಿಬೇವು, ಒಂದು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ಸೇರಿಸಿಕೊಳ್ಳಿ. ಇಶ್ಟು ಮಾಡಿದರೆ ಶುಂಟಿ ತಂಬುಳಿ ಸವಿಯಲು ತಯಾರು.

ಶುಂಟಿ ತಂಬುಳಿಯನ್ನು ಅನ್ನದೊಂದಿಗೆ ಅತವಾ ಹಾಗೆಯೇ ಕುಡಿಯಲು ನೀಡಬಹುದು.

(ಚಿತ್ರಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: