ಪನ್ನೀರ್ ಪ್ರಿಯರಿಗೆ ಇಲ್ಲಿದೆ ರುಚಿಯಾದ ಅಡುಗೆ

– ಕಲ್ಪನಾ ಹೆಗಡೆ.

ಪನ್ನೀರ್ Panneer

ಏನೇನು ಬೇಕು?

1 ಪಾಲಕ ಸೊಪ್ಪಿನ ಕಟ್ಟು
ಪನ್ನೀರು 1 ಪ್ಯಾಕ್
ಕಾಲು ಹೋಳು ಕಾಯಿತುರಿ
4 ಹಸಿಮೆಣಸಿನಕಾಯಿ
ಅರ‍್ದ ಚಮಚ ಶುಂಟಿ ಹಾಗೂ ಬೆಳ್ಳುಳ್ಳಿ ಪೇಸ್ಟ್
2 ಇರುಳ್ಳಿ
ರುಚಿಗೆ ತಕ್ಕಶ್ಟು ಉಪ್ಪು

ಮಾಡೋದು ಹೇಗೆ?

ಮೊದಲು ಪನ್ನೀರನ್ನು ಚೌಕದ ಆಕಾರದಲ್ಲಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತಣ್ಣೀರಲ್ಲಿ ಹಾಕಿಟ್ಟುಕೊಳ್ಳಿ. ಆನಂತರ ಒಂದು ಪಾತ್ರೆಯಲ್ಲಿ ಪಾಲಕ್ ಸೊಪ್ಪಿಗೆ ಸ್ವಲ್ಪ ನೀರನ್ನು ಹಾಕಿ ಬೇಯಿಸಿಕೊಳ್ಳಿ. ಆಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಹಸಿಮೆಣಸಿನಕಾಯಿಯನ್ನು ಹುರಿದು ಅದಕ್ಕೆ ಕಾಯಿತುರಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬೆಂದ ಪಾಲಕ್ ಸೊಪ್ಪನ್ನು ಮಿಕ್ಸಿ ಮಾಡಿಕೊಳ್ಳಿ.

ಬಳಿಕ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದಬಳಿಕ ಸಾಸಿವೆ ಕಾಳನ್ನು ಹಾಕಿ ರುಬ್ಬಿದ ಪಾಲಕ್ ಸೊಪ್ಪಿನ ಕಲಕ, ಕಾಯಿತುರಿ ಕಲಕ, ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ಸಣ್ಣಗೆ ಹೆಚ್ಚಿ ಹುರಿದ ಟೊಮೇಟೊ, ಸಣ್ಣಗೆ ಹೆಚ್ಚಿ ಹುರಿದ ಈರುಳ್ಳಿ, ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ. ಚೆನ್ನಾಗಿ ಕುದಿಯುತ್ತಿರುವಾಗ ಕತ್ತರಿಸಿದ ಪನ್ನೀರನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿ ಇಳಿಸಿಕೊಳ್ಳಿ. ತಯಾರಿಸಿದ ಪನ್ನೀರನ್ನು ಚಪಾತಿಯೊಂದಿಗೆ, ಪುರಿಯೊಂದಿಗೆ, ರೊಟ್ಟಿ, ನಾನ್ ಜೊತೆಗೆ ಅತವಾ ಊಟದ ಜೊತೆಗೆ ಸವಿಯಲು ನೀಡಿ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: