ಮಕ್ಕಳ ಕವಿತೆ: ಜಾಣನಾಗುವೆ

– ವೆಂಕಟೇಶ ಚಾಗಿ.

ಮಕ್ಕಳ ಕವಿತೆ, children's poem

ಹಕ್ಕಿಯಾಗುವೆ ನಾನು
ಹಕ್ಕಿಯಾಗುವೆ
ಹಕ್ಕಿಯಾಗಿ ಬಾನಿನಲ್ಲಿ
ಹಾರಿ ನಲಿಯುವೆ

ವ್ರುಕ್ಶವಾಗುವೆ ನಾನು
ವ್ರುಕ್ಶವಾಗುವೆ
ವ್ರುಕ್ಶವಾಗಿ ಹಣ್ಣು ನೆರಳು
ಜಗಕೆ ನೀಡುವೆ

ಮೋಡವಾಗುವೆ ನಾನು
ಮೋಡವಾಗುವೆ
ಮೋಡವಾಗಿ ಜಗಕೆ ನಾನು
ಮಳೆಯ ಸುರಿಸುವೆ

ಸೂರ‍್ಯನಾಗುವೆ ನಾನು
ಸೂರ‍್ಯನಾಗುವೆ
ಸೂರ‍್ಯನಾಗಿ ಜಗಕೆ ನಾನು
ಬೆಳಕು ನೀಡುವೆ

ವೈದ್ಯನಾಗುವೆ ನಾನು
ವೈದ್ಯನಾಗುವೆ
ವೈದ್ಯನಾಗಿ ರೋಗವನ್ನು
ವಾಸಿ ಮಾಡುವೆ

ಗುರುವಾಗುವೆ ನಾನು
ಗುರುವಾಗುವೆ
ಗುರುವಾಗಿ ಮಕ್ಕಳಿಗೆ
ನೀತಿ ಪಾಟ ಮಾಡುವೆ

ಜಾಣನಾಗುವೆ ನಾನು
ಜಾಣನಾಗುವೆ
ಜಾಣನಾಗಿ ಹೆತ್ತವರಿಗೆ
ಕೀರ‍್ತಿ ತರುವೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: