ಕವಿತೆ: ನೀ ಜೊತೆಗೆ ಇರುವೆಡೆ
– ವೆಂಕಟೇಶ ಚಾಗಿ.
ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು
ಅವಳದೇ ನೋಟಗಳ ಅಳಿಸದಿರಿ ಎಂದು
ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ
ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ
ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ
ಮಳೆಹನಿಯ ಕೋರುವೆನು ನೀ ನೆನೆಯುವಂತೆ
ಮಳೆಬಿಲ್ಲ ತಂದಿಟ್ಟ ಚಂದಿರನ ಹಣೆಗಿಟ್ಟು
ಆ ಮೇಗ ಮಳೆ ಸುರಿಯೇ ನಿನ್ನೊಳಗೆ ನಾ ಬಂದಿ
ಕಣ್ಣಂಚಿನ ಆ ನೋಟದಿ ನೀ ನಗೆಯ ಬೀರಿ
ಬಾನಂಚಿನ ಹನಿಯೊಂದು ಹೂ ಕೆನ್ನೆಯ ಸವರಿ
ಮುಂಗುರುಳಿನ ತಂಟೆಗೆ ನಾನಾಗುವೆ ತುಂಟ
ಮನದೊಳಗೆ ಮರೆಯಾಗು ಯಾರಿಗೂ ಹೇಳದಲೆ
ಪ್ರತಿ ಎಲೆಗಳ ಹನಿಮುತ್ತೆ ಅಕ್ಶತೆಯು ನಮಗೆ
ಆ ಬಾನಿಗೂ ಕರೆಯೋಲೆ ಕೊಡುವಾಸೆ ಇಂದು
ನೆಲವೆಲ್ಲ ಹಸಿರಾಗಿ ಎಲ್ಲೆಡೆಯೂ ಹೂ ತಂಬಿ
ನೀ ಜೊತೆಗೆ ಇರುವೆಡೆ ಜಗವೆಲ್ಲ ಮರೆವೆ
(ಚಿತ್ರ ಸೆಲೆ: wallarthd.com )
ಸುಂದರ ಕವಿತೆ.