ಕವಿತೆ: ನಾವೆಲ್ಲರ‍ೂ ಕೇವಲ ಮಾನವರ‍ು

– ಅಶೋಕ ಪ. ಹೊನಕೇರಿ.

ಬಡ ಹುಡುಗ, poor boy

ನರ‍ಕವೆಲ್ಲಿದೆ? ಸ್ವರ‍್ಗವೆಲ್ಲಿದೆ?
ತನ್ನ ಪಾಲಿನ ನರ‍ಕದಲಿ
ಈ ಮಗು ಜನ್ಮ ತಳೆದಾಯ್ತು
ಬದುಕುವುದು ಸವಾಲಾಯ್ತು!

ತಿನ್ನಲನ್ನವಿಲ್ಲ, ದಾಹಕ್ಕೆ ನೀರಿಲ್ಲ
ಹೇಗೋ ಜೀವ ಹಿಡಿದು ಬದುಕಿದ್ದೇನೆ
ಈ ಅಸಹಾಯಕ ಅಮಾಯಕರ‍
ನಡುವೆಯೂ

ನಿತ್ಯ ತಿನ್ನುವ ತುತ್ತು ಅನ್ನಕ್ಕಾಗಿ
ಕುಡಿಯುವ ಗುಟುಕು ನೀರಿಗಾಗಿಯೇ ಹೋರಾಟ
ಹಾಗಾದಾರೆ ಈ ಬುವಿಯೊಳಗೆ
ನನ್ನದೆಂತಹ ಕರ‍್ಮ?
ನನ್ನ ಬದುಕುವ ಹಕ್ಕನ್ನು
ಕಸಿದ ಮರ‍್ಮದಲಿ ನಿಮ್ಮ ಪಾಲೆಶ್ಟು?

ಕಡೆಯ ಪಕ್ಶ ಸತ್ಯವಿನ್ನೂ ಸತ್ತಿಲ್ಲ
ಮಾನವೀಯತೆಯ ಸೆಲೆ ಬತ್ತಿಲ್ಲ
ನನ್ನ ಹಸಿವಿಗೆ ದಾಹಕೆ
ಉಣಿಸಿ ತಣಿಸುವ
ಕೈ ಇನ್ನೂ ಇದ್ದಾವೆ

ಅನ್ನವನು ಬಿಸಾಡಿ
ನೀರ‍ನ್ನು ಚೆಲ್ಲಾಡಿ
ಮೆರೆಯುವ ಮಾನವರೇ
ಇನ್ನಾದರ‍ೂ ಪಾಟ ಕಲಿಯಿರಿ
ಬಿಸಾಡಿದ ಕಾಳು ಅನ್ನ
ಚೆಲ್ಲಿದ ಹನಿ ನೀರ‍ು
ಅದು ಈ ಬುವಿಯಲ್ಲಿನ
ಹಸಿವು ದಾಹಗಳಿಂದ
ತತ್ತರಿಸುವ ಇನ್ನಾರ‍ದೋ ಪಾಲಿನದು!

ಸ್ವಾರ‍್ತರಾಗದಿರಿ
ಅಹಂಕಾರ‍ದಿಂದ ಮೆರೆಯದಿರಿ
ನಾವು ಇನ್ಯಾರ‍ದೋ ಪಾಲಿನ
ಅನ್ನ ನೀರ‍ು ಕಸಿದರೆ
ಪ್ರ‍ಕ್ರುತಿ ನಮ್ಮ ಪಾಲಿನ
ಅನ್ನ ನೀರ‍ು ಕಸಿಯದಿರ‍ನು

ಹಂಚಿ ಬಾಳಿ ಕೈ ಹಿಡಿದು
ಬೆಸೆದು ಬಾಳಿ ಏಕೆಂದರೆ
ನಾವೆಲ್ಲರ‍ೂ ಕೇವಲ ಮಾನವರ‍ು
ನಾವೆಲ್ಲರ‍ೂ ಕೇವಲ ಮಾನವರ‍ು!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Dr Maruti Hebballi says:

    ನಾವೆಲ್ಲರೂ ಕೇವಲ ಮಾನವರು..ಕೇವಲ ಮಾನವರು..

ಅನಿಸಿಕೆ ಬರೆಯಿರಿ: