ಕವಿತೆ: ಕಾಣದ ಊರಿನ ಕಡೆಗೆ

– ಶಶಾಂಕ್.ಹೆಚ್.ಎಸ್.

ಗೊಂದಲ, ಬದುಕು, confusion

ಉತ್ತರವಿಲ್ಲದ ನೂರಾರು ಪ್ರಶ್ನೆಗಳೊಂದಿಗೆ
ಸಾಗಿದ್ದಾಗಿದೆ ಸಹಸ್ರಾರು ಮೈಲಿಗಳ ಪಯಣವು
ಮುಂದಿದೆ ಲಕ್ಶಾಂತರ ಮೈಲಿಗಳ ಓಟವು
ಎಲ್ಲವ ಮುಗಿಸಿ ನಾ ಸೇರಬೇಕಾಗಿದೆ
ಯಾವುದಾದರೂ ಒಂದು ಬದುಕಿನ ದಡವ
ಯಾವುದು ಆ ದಡ? ಗೊತ್ತಿಲ್ಲ!

ಜೀವನವು ಬದಲಾಗಿದೆ
ಬದುಕಿನ ದಾರಿಯು ಬೇರೆಯದಾಗಿದೆ
ಮುಂದಿನ ಬವಿಶ್ಯವು ತಿಳಿಯದಾಗಿದೆ
ಈ ಹುಟ್ಟಿಗೊಂದು ಗುರಿಯೇ ಇಲ್ಲದಾಗಿದೆ
ಮುಂದೇನು? ಉತ್ತರವಿಲ್ಲದ ಪ್ರಶ್ನೆ!

ಮನಸು ಗೊಂದಲದ ಗೂಡಾಗಿದೆ
ಕಂಗಳು ಕಂಬನಿಯಿಂದ ತುಂಬಿ ಹೋಗಿವೆ
ಹ್ರುದಯ ನೋವಿನಿಂದ ನರಳಿ ಸಾಯುತ್ತಿದೆ
ಏನು ತಿಳಿಯದ ಸ್ತಿತಿಯ ನಾ ತಲುಪಿದ್ದಾಗಿದೆ
ಮಾಡುವುದಾದರೂ ಏನನ್ನು? ತಿಳಿಯದು!

ಎಲ್ಲಾ ಅವಮಾನಗಳನ್ನ ಮೆಟ್ಟಿ ನಿಲ್ಲಬೇಕಿದೆ
ಮನಸಿನ ಎಲ್ಲಾ ಗೊಂದಲಗಳನ್ನ ನಿವಾರಿಸಬೇಕಿದೆ
ಈ ಅರ‍್ತವಿಲ್ಲದ ಬದುಕಿಗೊಂದು ಅರ‍್ತ ಕಲ್ಪಿಸಬೇಕಿದೆ
ಎಲ್ಲಾ ನೋವುಗಳನ್ನ ಸಹಿಸಿ ನಾ ಬದುಕಬೇಕಿದೆ
ಇದು ಸಾದ್ಯವೇ? ಉತ್ತರವಿಲ್ಲ!

ಆದರೂ ನಾ ಸಾಗಿಸಬೇಕಾಗಿದೆ
ಈ ಬದುಕೆಂಬ ಬಂಡಿಯ
ಕಾಣದ ಊರಿನ ಕಡೆಗೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: