ಮೆಣಸುಗಡುಬು

–  ಸವಿತಾ.

Menasukadubu ಮೆಣಸುಕಡುಬು

ಬೇಕಾಗುವ ಪದಾರ‍್ತಗಳು

1 ಬಟ್ಟಲು ಒಣ ಕೊಬ್ಬರಿ ತುರಿ
1 ಬಟ್ಟಲು ಹುರಿಗಡಲೆ ಪುಡಿ
1 ಬಟ್ಟಲು ಬೆಲ್ಲದ ಪುಡಿ
1/2 ಇಂಚು ಹಸಿ ಶುಂಟಿ ತುರಿ
15- 20 ಕರಿ ಮೆಣಸಿನ ಕಾಳು ಪುಡಿ
1&1/2 (ಒಂದೂವರೆ ಬಟ್ಟಲು) ಗೋದಿ ಹಿಟ್ಟು
2 ಏಲಕ್ಕಿ ಪುಡಿ
2 ಚಮಚ ಗಸಗಸೆ
2-3 ಚಮಚ ತುಪ್ಪ

ಮಾಡುವ ಬಗೆ

ಗೋದಿ ಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಿ . ಒಂದು ಪಾತ್ರೆಯಲ್ಲಿ ಒಣ ಕೊಬ್ಬರಿ ತುರಿ ಮಾಡಿ. ಅದಕ್ಕೆ ಹುರಿಗಡಲೆಯನ್ನು ಮಿಕ್ಸರ್‌ನಲ್ಲಿ ಹಿಟ್ಟು ಮಾಡಿ ಸೇರಿಸಿಕೊಳ್ಳಿ. ಬಳಿಕ ಬೆಲ್ಲದ ಪುಡಿ ಮಾಡಿ ಸೇರಿಸಿ. ಮತ್ತೆ ಸ್ವಲ್ಪ ತುರಿದ ಹಸಿ ಶುಂಟಿ, ಕರಿ ಮೆಣಸಿನ ಕಾಳು ಪುಡಿ, ಏಲಕ್ಕಿ ಪುಡಿ ಸೇರಿಸಿ. ಕೊನೆಗೆ ಗಸಗಸೆ ಹಾಕಿ ಚೆನ್ನಾಗಿ ಬೆರೆಸಿ ಇಟ್ಟುಕೊಳ್ಳಿ.

ಗೋದಿ ಹಿಟ್ಟಿನಿಂದ ಎಲೆ ಲಟ್ಟಿಸಿ ಮಾಡಿಟ್ಟ ಮಿಶ್ರಣ ತುಂಬಿ.  ಅಂಚಿಗೆ ಸ್ವಲ್ಪ ನೀರು ಹಚ್ಚಿ ಒತ್ತಿ ಇಟ್ಟುಕೊಳ್ಳಿ. ಒಂದು ಬಾಣಲೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ. ಒಂದು ಚಮಚ ತುಪ್ಪ ನೀರಿಗೆ ಹಾಕಬೇಕು. ಕುದಿಯುವ ನೀರಿನಲ್ಲಿ ಮಾಡಿಟ್ಟ ಕಡುಬು ಹಾಕಿ ಮೇಲೆ ಒಂದು ಬಟ್ಟೆ ಅತವಾ ಟವೆಲ್ ಮುಚ್ಚಿ ಬೇಯಿಸಿ. ಬಳಿಕ ಒಂದು ಪಾತ್ರೆಯಲ್ಲಿ ತಣ್ಣನೆಯ ನೀರು ಇಟ್ಟಿರಬೇಕು. ಬೆಂದ ಕಡುಬು ತೆಗೆದು ತಣ್ಣನೆಯ ನೀರಿನಲ್ಲಿ ಹಾಕಿ ಎರಡು ನಿಮಿಶ ಬಿಟ್ಟು ತೆಗೆದು ತಟ್ಟೆಯಲ್ಲಿ ಹಾಕಿ ಕೊಳ್ಳಿ. ಈಗ ಮೆಣಸುಗಡುಬು ಸವಿಯಲು ಸಿದ್ದ. ಇದನ್ನು ತುಪ್ಪ ಹಾಕಿ ತಿನ್ನಲು ಕೊಡಿ 🙂

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: