ಮಕ್ಕಳ ಕವಿತೆ: ಡಯನಾಸೋರು

– ಚಂದ್ರಗೌಡ ಕುಲಕರ‍್ಣಿ.

dinosaurs, ಡೈನೋಸಾರ್

ಕಂಟಿಯಲಾಡುವ ಓತಿಕ್ಯಾತ
ಆದರೆ ಡಯನಾಸೋರು
ಆನೆ ಒಂಟೆ ಕಾಡನು ತೊರೆದು
ಸೇರಿಬಿಡುವವು ಊರು

ಹುಲಿ ಸಿಂಹಕೆ ಇಲಿ ಬಿಲದಶ್ಟು
ಸಾಕೇಸಾಕು ಜಾಗ
ನಾಯಿ ಬೆಕ್ಕು ಇರುವೆಯಂತೆ
ಕಾಣುವವಲ್ಲ ಆಗ

ಪುಸ್ತಕ ಓದುತ ಸಿನಿಮಾ ನೋಡುತ
ತಿಳಿಯುವದೆಲ್ಲವ ಬಿಟ್ಟು
ಮಕ್ಕಳು ನೇರ ನೋಡಿಬಿಡುವರು
ಅಂಜ್ಕಿ ಬಯ ಹೊರಗಿಟ್ಟು

ಪುಟಾಣಿ ಪುಟ್ಟರ ಕುಶಿ ಸಂತಸವ
ತಡೆದು ಹಿಡಿವವರಾರು
ಬೆರಗಲಿ ಮುಳುಗಿ ಕುಣಿಕುಣಿದಾಡಿ
ಕೇಕೆ ಹೊಡೆವರು ಜೋರು

ತುಂಟರ ಕಲ್ಪನೆ ವಿಸ್ಮಯ ಲೋಕಕೆ
ನಿಲ್ಲದು ಯಾವುದು ಸಾಟಿ
ಬೆಲೆಯನು ಕಟ್ಟಲು ಆಗದು ನೋಡು
ಸಾವಿರ ಲಕ್ಶ ಕೋಟಿ

(ಚಿತ್ರ ಸೆಲೆ: maxpixel.net)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಮಾರಿಸನ್ ಮನೋಹರ್ says:

    ಡೈನಾಸೋರ್ ಮೇಲೆ ಬರೆದ ಮೊದಲ ಕನ್ನಡ ಪದ್ಯ !

  2. chandragouda kulkarni says:

    ನನ್ನಿ ….

chandragouda kulkarni ಗೆ ಅನಿಸಿಕೆ ನೀಡಿ Cancel reply