ಅಳ್ಳಿಟ್ಟು: ಪಂಚಮಿ ಹಬ್ಬದ ಸಿಹಿ

– ಸವಿತಾ.

aLLiTTu, ಅಳ್ಳಿಟ್ಟು

ಬೇಕಾಗುವ ಸಾಮಾನುಗಳು

  • ಜೋಳದ ಅರಳು – 1 ಲೋಟ
  • ಅಕ್ಕಿ – 1 ಚಮಚ
  • ಗೋದಿ ಹಿಟ್ಟು – 1 ಲೋಟ
  • ತುಪ್ಪ – 2-3 ಚಮಚ
  • ಬೆಲ್ಲದ ಪುಡಿ – 1 ಲೋಟ
  • ನೀರು – 2 ಲೋಟ
  • ಏಲಕ್ಕಿ – 2
  • ಲವಂಗ – 2
  • ಗಸಗಸೆ – 1/4 ಚಮಚ
  • ಜಾಯಿಕಾಯಿ ಪುಡಿ – ಚಿಟಿಕೆ

ಮಾಡುವ ಬಗೆ

ಒಂದು ಚಮಚ ಅಕ್ಕಿ ಹುರಿದು ತೆಗೆದಿಡಿ. ಜೋಳದ ಅರಳು, ಅಕ್ಕಿ ಸೇರಿಸಿ ಮಿಕ್ಸರ್‌ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಗೋದಿ ಹಿಟ್ಟು, ತುಪ್ಪ ಸೇರಿಸಿ ಚೆನ್ನಾಗಿ ಹುರಿದು ತೆಗೆದಿಡಿ. ಸ್ವಲ್ಪ ನೀರು ಕಾಯಿಸಿ, ಬೆಲ್ಲದ ಪುಡಿ ಹಾಕಿ ಬೆಲ್ಲ ಕರಗಿಸಿ. ಹುರಿದ ಅರಳು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ತಿರುವಿ. ಸ್ವಲ್ಪ ಗಟ್ಟಿಯಾಗುತ್ತಾ ಮುದ್ದೆ ಯಂತೆ ಮೇಲೆ ಏಳತೊಡಗಿದ ಮೇಲೆ ಒಲೆ ಆರಿಸಿ.

ಏಲಕ್ಕಿ, ಲವಂಗ ಮತ್ತು ಗಸಗಸೆ, ಜಾಯಿಕಾಯಿ ಎಲ್ಲ ಸೇರಿಸಿ ಪುಡಿ ಮಾಡಿ ಹಾಕಿ. ಇನ್ನೊಮ್ಮೆ ಕಲಸಿ ಕೈಗೆ ತುಪ್ಪ ಹಚ್ಚಿ ಬಟ್ಟಲಿನ ಆಕಾರ ಕೊಟ್ಟು ಅಳ್ಳಿಟ್ಟು ಮಾಡಿ ಇಟ್ಟುಕೊಳ್ಳಿ.

ಅಳ್ಳಿಟ್ಟಿನಲ್ಲಿ ತುಪ್ಪ ಹಾಕಿ ಕೊಂಡು ಬಿಸಿ ಬಿಸಿ ಇರುವಾಗಲೇ ತಿಂದರೆ ತುಂಬಾ ರುಚಿಯಾಗಿರುತ್ತದೆ. ಇದನ್ನು ನಾಗರ ಪಂಚಮಿ ಹಬ್ಬದ ದಿನ ಮಾಡುತ್ತಾರೆ, ಮಳೆಗಾಲದ ದಿನಗಳಲ್ಲಿಯೂ ಕೂಡ ಇದನ್ನು ಮಾಡಿ ತಿನ್ನಬಹುದು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: