ಕವಿತೆ: ಶಿರಬಾಗಿ ವಂದಿಪೆ ನನ್ನ ಗುರುವೆ

– ವೆಂಕಟೇಶ ಚಾಗಿ.

ಪ್ರಾರ‍್ತನೆ, Prayer

ಶಿರಬಾಗಿ ವಂದಿಪೆ ನನ್ನ ಗುರುವೆ
ಕರುಣೆ ತೋರಿ ಕಲಿಸು ನಮಗೆ
ನನ್ನ ಗುರುವೆ

ನ್ಯಾಯ ನೀತಿ ದರ‍್ಮಗಳ
ತಿಳಿಸು ಗುರುವೆ
ಸತ್ಯ ಮಾರ‍್ಗದಲ್ಲಿ ನಡೆದು
ನಾನು ಬದುಕುವೆ

ಅನ್ಯಾಯವ ಎದುರಿಸುವ
ದೈರ‍್ಯ ನೀಡು ಗುರುವೆ
ದುಶ್ಟತೆಯ ಅಳಿಸುವಂತ
ಕಲೆಯ ಕಲಿಸು ಗುರುವೆ

ನಡೆದು ಹೋದ ತಪ್ಪುಗಳ
ಹೇಳಿ ಎಚ್ಚರಿಸು ಗುರುವೆ
ಸಾದನೆಯ ದಾರಿ ತೋರಿ
ಎನ್ನ ಮುನ್ನಡೆಸು ಗುರುವೆ

ಎಲ್ಲರನ್ನು ಪ್ರೀತಿಸುವಂತ
ಮನಸು ಬೆಳೆಸು ಗುರುವೆ
ಕರುಣೆ ದಯೆ ಸಮಾನತೆಯ
ನಿಯಮ ಕಲಿಸು ಗುರುವೆ

ಅಗ್ನಾನ ಅಂದಕಾರ
ಮನದಿ ಅಳಿಸು ಗುರುವೆ
ಬದುಕಿನಲ್ಲಿ ಸಾರ‍್ತಕತೆಯ
ಪಡೆದು ಬದುಕ ಗೆಲ್ಲುವೆ

(ಚಿತ್ರ ಸೆಲೆ: wikihow)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: