
Face Kid Cute Baby Adorable Small Baby Girl
ಕವಿತೆ: ಮುದ್ದಾದ ಮುಗುಳು
ಮುತ್ತಿನಾ ತೋರಣದ
ಮುಂದಿನ ಬಾಗಿಲಲಿ
ಮೆಲ್ಲನೆ ಮುಂದಡಿ ಇಡುತಿಹ
ಮುದ್ದಾದ ಮುಗುಳೆ
ಅಂಗಳದಿ ಓಡಾಡಿ
ಕಂಗಳಲಿ ಕುಣಿದಾಡಿ
ತಿಂಗಳನ ಕರೆತರುವ
ಬಣ್ಣದ ಚಿಟ್ಟೆಯಂತಹ ತರಲೆ
ಕೋಗಿಲೆಯ ಬರಹೇಳಿ
ಮೊಲಗಳಿಗೆ ಕತೆಹೇಳಿ
ಹಸುಕರಕೆ ಮಯ್ ಸವರಿ
ಮರುಗುವಾ ಮರುಳೆ
ಇಬ್ಬನಿಗೆ ಉಬ್ಬುವ
ರಾತ್ರಿಯನು ತಬ್ಬುವ
ಕತ್ತಲೆಯಲಿ ಮಿನುಗುವ
ಪಟಾಕಿಯ ಸುರುಳೆ
(ಚಿತ್ರ ಸೆಲೆ: freegreatpicture.com)