ಮೆಕ್ಕಿಕಾಯಿ ಉಪ್ಪಿನಕಾಯಿ
– ಸವಿತಾ.
‘ಮೆಕ್ಕಿಕಾಯಿ’ – ಇದು ಉತ್ತರ ಕರ‍್ನಾಟಕದಲ್ಲಿ ಹೆಚ್ಚಾಗಿ ಸಿಗುತ್ತದೆ. ರುಚಿಯಲ್ಲಿ ಸ್ವಲ್ಪ ಒಗರು ಇದ್ದರೂ ಆರೋಗ್ಯಕ್ಕೆ ಒಳ್ಳೆಯದು.
ಬೇಕಾಗುವ ಸಾಮಾನುಗಳು
- ಮೆಕ್ಕಿಕಾಯಿ – 1/4 ಕಿಲೋ
- ಸಾಸಿವೆ – 2 ಚಮಚ
- ಮೆಂತೆ – 2 ಚಮಚ
- ಬೆಳ್ಳುಳ್ಳಿ – 2 ಗಡ್ಡೆ
- ಉಪ್ಪು – 2 ಚಮಚ
- ಕಾರ – 2 ಚಮಚ
- ಅರಿಶಿಣ ಪುಡಿ – 1 ಚಮಚ
- ಇಂಗು – 1/2 ಚಮಚ
- ಎಣ್ಣೆ – 4 ಚಮಚ
ಮಾಡುವ ಬಗೆ
ಮೊದಲು ಸಾಸಿವೆ ಮತ್ತು ಮೆಂತೆಯನ್ನು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ ಬಿಡಿಸಿ ಎಸಳು ತೆಗೆದು ಇಟ್ಟುಕೊಳ್ಳಿ. ಮೆಕ್ಕಿಕಾಯಿಯನ್ನು ತೊಳೆದು ಉದ್ದುದ್ದ ಕತ್ತರಿಸಿ ಹೋಳು ಮಾಡಿಟ್ಟುಕೊಳ್ಳಿ.
ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಎಸಳು, ಇಂಗು ಸೇರಿಸಿ ಹುರಿದು ಒಲೆ ಆರಿಸಿ. ಉಪ್ಪು ಅರಿಶಿಣ ಕಾರದ ಪುಡಿ ಸೇರಿಸಿ ಕಲಸಿ. ಇದಕ್ಕೆ ಮೆಂತೆ ಪುಡಿ ಮತ್ತು ಸಾಸಿವೆ ಪುಡಿ ಸೇರಿಸಿ ಕಲಸಿ. ಕತ್ತರಿಸಿದ ಮೆಕ್ಕಿಕಾಯಿ ಹೋಳುಗಳನ್ನು ಸೇರಿಸಿ, ಚೆನ್ನಾಗಿ ಕಲಸಿದರೆ ಮೆಕ್ಕಿಕಾಯಿಯ ಉಪ್ಪಿನಕಾಯಿ ತಯಾರು. ಒಂದು ಗಾಜಿನ ಬಾಟಲಿಯಲ್ಲಿ ತುಂಬಿ ಇಟ್ಟುಕೊಂಡರೆ, ಇದು ವರ‍್ಶ ಪೂರ‍್ತಿ ಹಾಳಾಗುವುದಿಲ್ಲ.
ಇತ್ತೀಚಿನ ಅನಿಸಿಕೆಗಳು