ಶಂಕರ ಪಾಳೆ

– ಸವಿತಾ.

ಬೇಕಾಗುವ ಸಾಮಾನುಗಳು

  • ಚಿರೋಟಿ ರವೆ – 1 ಲೋಟ
  • ಮೈದಾ – 1 ಲೋಟ
  • ಗೋದಿ ಹಿಟ್ಟು – 1 ಲೋಟ
  • ಕಾದ ಎಣ್ಣೆ – 2 ಚಮಚ
  • ಅಡುಗೆ ಸೋಡಾ – 1/4 ಚಮಚ
  • ಸಕ್ಕರೆ ಪುಡಿ – 3/4 ಲೋಟ
  • ಸೋಂಪು ಪುಡಿ – 1 ಚಮಚ
  • ಎಣ್ಣೆ – ಕರಿಯಲು

ಮಾಡುವ ಬಗೆ

ಚಿರೋಟಿ ರವೆ, ಮೈದಾ, ಗೋದಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು, ಅಡುಗೆ ಸೋಡಾ, ಸಕ್ಕರೆ ಮತ್ತು ಸೋಂಪಿನ ಪುಡಿ ಸೇರಿಸಿ ಸ್ವಲ್ಪ ನೀರು ಹಾಕಿ ಕಲಸಿ ಒಂದು ಗಂಟೆ ಕಾಲ ನೆನೆಯಲು ಇಡಿ. ಬಳಿಕ ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು ಸ್ವಲ್ಪ ಹಿಟ್ಟು ಹಿಡಿದು ಚಪಾತಿಯ ಹಾಗೇ ದೊಡ್ಡದಾಗಿ ಲಟ್ಟಿಸಿ.

ಒಂದು ಚಾಕುವಿನಿಂದ ಚೌಕ ಅತವಾ ಡೈಮಂಡ್ ಆಕಾರದ ಸಣ್ಣ ತುಂಡುಗಳಾಗಿ ಕತ್ತರಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಶಂಕರ ಪಾಳೆ ಸವಿಯಲು ಸಿದ್ದ. ಸ್ವಲ್ಪ ಆರಿದ ಮೇಲೆ ಡಬ್ಬಿಯಲ್ಲಿ ತೆಗೆದು ಇಟ್ಟುಕೊಳ್ಳಿ. ಒಂದು ವಾರದವರೆಗೆ ಇಟ್ಟು ತಿನ್ನಬಹುದು. ಶಂಕರ ಪಾಳೆಯನ್ನು ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಮಾಡಲಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications