ಮಾಡಿ ಸವಿಯಿರಿ : ಚೊಂಡೆ

– ಸವಿತಾ.

ಚೊಂಡೆ, Chonde

ಬೇಕಾಗುವ ಸಾಮಾನುಗಳು

  • ಮೈದಾ ಇಲ್ಲವೇ ಗೋದಿ ಹಿಟ್ಟು – 2 ಲೋಟ
  • ಚಿರೋಟಿ ರವೆ – 2 ಚಮಚ
  • ಕಾದ ಎಣ್ಣೆ – 2 ಚಮಚ
  • ಹುರಿಗಡಲೆ ಹಿಟ್ಟು – 1 ಲೋಟ
  • ಒಣ ಕೊಬ್ಬರಿ ತುರಿ – 1 ಲೋಟ
  • ಸಕ್ಕರೆ ಪುಡಿ – 1 ಲೋಟ
  • ಏಲಕ್ಕಿ – 4
  • ಗಸಗಸೆ – 1 ಚಮಚ
  • ಜಾಯಿಕಾಯಿ ಪುಡಿ – 1 ಚಿಟಿಕೆ
  • ಲವಂಗ – 4

ಮಾಡುವ ಬಗೆ

ಚೊಂಡೆ ಮಾಡಲು ಮೈದಾ ಹಿಟ್ಟು ಬಳಸಬಹುದು, ಆರೋಗ್ಯದ ದ್ರುಶ್ಟಿಯಿಂದ ಗೋದಿ ಕೂಡ ಬಳಸುತ್ತಾರೆ. ಹಿಟ್ಟು, ರವೆ, ಕಾದ ಎಣ್ಣೆ, ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ನಾದಿ ಒಂದು ಗಂಟೆ ಕಾಲ ನೆನೆಯಲು ಇಡಿ.

ಮಿಕ್ಸರ್ ನಲ್ಲಿ ಪುಟಾಣಿ ಪುಡಿ ಮಾಡಿ, ಅದಕ್ಕೆ ಒಣ ಕೊಬ್ಬರಿ ತುರಿ, ಸಕ್ಕರೆ ಪುಡಿ ಮಾಡಿ ಸೇರಿಸಿ. ಏಲಕ್ಕಿ, ಲವಂಗ, ಗಸಗಸೆ, ಜಾಯಿಕಾಯಿ ಸ್ವಲ್ಪ ಹುರಿದು ನಂತರ ಪುಡಿ ಮಾಡಿ ಸೇರಿಸಿ ಕಲಸಿ ಇಟ್ಟುಕೊಳ್ಳಿ. ಎಣ್ಣೆ ಕಾಯಲು ಇಟ್ಟು, ಮೊದಲೇ ಕಲಸಿಟ್ಟುಕೊಂಡ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು ಸ್ವಲ್ಪ ಹಿಟ್ಟು ಹಚ್ಚಿ ಪೂರಿ ಲಟ್ಟಿಸಿ. ಕಾದ ಎಣ್ಣೆಯಲ್ಲಿ, ಸಣ್ಣ ಉರಿ ಇಟ್ಟು ಕರಿಯಿರಿ. ಕರಿದು ತೆಗೆದ ಪೂರಿಯ ಮೇಲೆ ಸಿಹಿ ಮಿಶ್ರಣ ಸ್ವಲ್ಪ ಹಾಕಿ ಹರಡಿ ಅರ‍್ದ ಮಡಚಿ. ಮತ್ತೆ ಸ್ವಲ್ಪ ಮಿಶ್ರಣ ಹಾಕಿ ಇನ್ನೊಂದು ಮಡಿಕೆ ಮಡಿಚಿ. ಈಗ ಇದು ತ್ರಿಕೋನ ಆಕಾರಕ್ಕೆ ಬರುತ್ತದೆ. ಹೀಗೆ ಒಂದೊಂದು ಪೂರಿ ಕರಿದಾದ ಮೇಲೆ ಸ್ವಲ್ಪ ಸಿಹಿ ಮಿಶ್ರಣ ಹಾಕಿ ಎರಡು ಬಾರಿ ಮಡಚಿ ಇಟ್ಟುಕೊಳ್ಳಿ. ಈಗ ಚೊಂಡೆ ಸವಿಯಲು ಸಿದ್ದ. ಒಂದು ಗಂಟೆ ಆರಲು ಬಿಟ್ಟು ಡಬ್ಬದಲ್ಲಿ ಹಾಕಿಟ್ಟರೆ, ಒಂದು ವಾರದವರೆಗೂ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: