ಕವಿತೆ: ಬನ್ನಿ ಕೊಡುವ ಬನ್ನಿ

– ವೆಂಕಟೇಶ ಚಾಗಿ.

ಬನ್ನಿ ಬನ್ನಿ ಬನ್ನಿ ಕೊಡುವ ಬನ್ನಿ
ಬಂಗಾರದ ಬನ್ನಿ ಸಂತಸ ತನ್ನಿ
ನಿನ್ನೆ ಮೊನ್ನಿಯ ದ್ವೇಶವ ಮರೆತು
ಬನ್ನಿ ಬನ್ನಿ ಕೊಡಿ ಬಂಗಾರದ ಬನ್ನಿ

ಹುಸಿ ಮುನಿಸೆಲ್ಲಾ ಹುಸಿಯಾಗಲಿ
ಮನಸಿನ ಮಾತು ಮ್ರುದುವಾಗಲಿ
ಪ್ರೀತಿಯ ಎಲ್ಲೆಡೆ ಹರಡುವ ಬನ್ನಿ
ಬನ್ನಿ ಬನ್ನಿ ತನ್ನಿ ಬಂಗಾರದ ಬನ್ನಿ

ಶುದ್ದ ಉಸಿರನು ಕೊಡುವಾ ಬನ್ನಿ
ಕೋಪ ತಾಪಗಳ ಸುಡುವಾ ಬನ್ನಿ
ಸ್ನೇಹ ಸಂಬಂದ ಬೆಳೆಸುವ ಬನ್ನಿ
ಹಿರಿಯರೆ ಕಿರಿಯರೆ ನಿಮಗಿದೋ ಬನ್ನಿ

ಮಾಸಿದ ಪ್ರೀತಿಯ ಬೆಳೆಯುವ ಬನ್ನಿ
ಸ್ನೇಹ ಸಹಕಾರ ಬೆಸೆಯುವ ಬನ್ನಿ
ಹಬ್ಬದ ಸಡಗರ ನೋಡುವ ಬನ್ನಿ
ಮಾನವ ದರ‍್ಮಕೆ ಜೈ ಜೈ ಎನ್ನುವ ಬನ್ನಿ

ಶುದ್ದ ವಿಚಾರಗಳ ಬೆಳೆಸುವ ಬನ್ನಿ
ಸಂಸ್ಕ್ರುತಿ ಅಳಿಸದೇ ಬೆಳೆಸುವ ಬನ್ನಿ
ಹಬ್ಬದ ವಿಗ್ನಾನ ಹುಡುಕುವ ಬನ್ನಿ
ಬದುಕಲಿ ಬಂಗಾರ ಬೆಳೆಸುವ ಬನ್ನಿ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Maheedasa says:

    ಅದ್ಭುತ! ಬನ್ನಿ ಎಂಬ ಪದದ ಮೇಲೆ ಆಡಿರುವ ಪನ್ನಾಟ ಅದ್ಭುತ!

ಅನಿಸಿಕೆ ಬರೆಯಿರಿ: