ಹಸಿರು ಟೊಮೇಟೋ ಚಟ್ನಿ

– ಸವಿತಾ.

ಹಸಿರು ಟೊಮೇಟೋ ಚಟ್ನಿ, green tomato chutney

ಬೇಕಾಗುವ ಸಾಮಾನುಗಳು

 • ಟೊಮೇಟೋ – 4 (ಕಾಯಿ/ಹಸಿರಾಗಿರುವುದು)
 • ಹಸಿ ಮೆಣಸಿನಕಾಯಿ – 4
 • ಬೆಳ್ಳುಳ್ಳಿ – 4 ಎಸಳು
 • ಜೀರಿಗೆ – 1 ಚಮಚ
 • ಕರಿಬೇವು – 10 ಎಲೆ
 • ಕಡಲೇ ಬೀಜ – 4 ಚಮಚ
 • ಬೆಲ್ಲ – 4 ಚಮಚ
 • ಉಪ್ಪು – ರುಚಿಗೆ ತಕ್ಕಶ್ಟು
 • ಅರಿಶಿಣ – ಸ್ವಲ್ಪ
 • ಕೊತ್ತಂಬರಿ ಸೊಪ್ಪು – ಸ್ವಲ್ಪ
 • ಎಣ್ಣೆ – 1 ಚಮಚ

ಮಾಡುವ ಬಗೆ

ಹಸಿರಾಗಿರುವ ಟೊಮೇಟೋ ಕಾಯಿಯನ್ನು ತೊಳೆದು ಒಣಗಲು ಬಿಡಿ. ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಟೊಮೇಟೋ ಕತ್ತರಿಸಿ ಬಿಸಿ ಎಣ್ಣೆಗೆ ಹಾಕಿ ಹುರಿಯಿರಿ. ಬೆಳ್ಳುಳ್ಳಿ ಎಸಳು, ಜೀರಿಗೆ, ಕರಿಬೇವು, ಹಸಿ ಮೆಣಸಿನಕಾಯಿ, ಕಡಲೇ ಬೀಜ, ಉಪ್ಪು, ಅರಿಶಿಣ ಹಾಕಿ ಚೆನ್ನಾಗಿ ಹುರಿದು ನಂತರ ಬೆಲ್ಲ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ. ಬೇಕಾದರೆ ಸ್ವಲ್ಪ ಲವಂಗ, ದಾಲ್ಚಿನ್ನಿ ಪುಡಿ ಸೇರಿಸಬಹುದು. ಈಗ ಕಾಯಿ ಟೊಮೇಟೋ ಸವಿಯಲು ಚಟ್ನಿ ತಯಾರಾಯಿತು.

ಕಾಯಿ ಟೊಮೇಟೋ ಚಟ್ನಿಯನ್ನು ರೊಟ್ಟಿ ಅತವಾ ಚಪಾತಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: