ಕವಿತೆ: ನೆನಪಿನ ದೋಣಿಯಲಿ…

– ನವೀನ್ ಜಿ. ಬೇವಿನಾಳ್.

ಮನಸು, Mind, memories, ನೆನಪು

ನೆನಪಿನ ದೋಣಿಯಲಿ
ಮುಂದೆ ಮುಂದೆ ಸಾಗುತ
ಹಿಂಬದಿಗೆ ತಳ್ಳುವೆವು
ಸುಂದರ ಸುಮದುರ ಕ್ಶಣಗಳ

ಸಮಯವಿಲ್ಲ ಯಾರಲ್ಲೂ
ಹಣವುಂಟು ಎಲ್ಲರ ಬಳಿಯಲ್ಲೂ
ಹಣದಿಂದ ಸಮಯವ
ಕರೀದಿ ಮಾರುಕಟ್ಟೆಗಳು ಲಬ್ಯವಿಲ್ಲ
ಮಾಯಲೋಕದ ಜಗದೊಳಗೆ

ಪ್ರಾತಮಿಕ ಶಿಕ್ಶಣದಲ್ಲಿ
ಬರದ ಅಕ್ಶರಗಳು
ಪ್ರೌಡತೆಯಲಿ ಮರುಕಳಿಸಿದವು
ಪ್ರೇಮ ಕವನಗಳಾಗಿ
ತಳ್ಳಿದವು ನಾಗಲೋಕದ
ಉಯ್ಯಾಲೆಯೊಂದಿಗೆ ಹಿಂದೆ ಬರದಂತೆ

ನಂತರದ ಶಿಕ್ಶಣ
ನಿಮಗೆ ಬಿಟ್ಟ ಉಪಕರಣ
ಉಪಯೋಗಿಸಿ ಕೊಂಡರೆ
ಬಾಳು ಬಂಗಾರದ ಡಣ ಡಣ
ಗುರುಗಳು ಹೇಳಿದರು ಇದೊಂದೇ
ಅರ‍್ತವಾಗದ ವ್ಯಾಕರಣ

ನೆನಪಿಸಿಕೊಂಡು ಸಾಗುವೆವು
ಸುಂದರ ಕ್ಶಣಗಳ
ಒಂಟಿ ಒಬ್ಬಂಟಿಯಾಗಿ
ಮುಗುಳುನಗೆಯ ಸ್ನೇಹಿತನಾಗಿ
ಕಣ್ಣಿದ್ದರು ಕುರುಡನಾಗಿ

ನೆನಪುಗಳು ಬಂದರೆ
ಇನ್ನಿರದ ಕುಶಿಗಳು
ಜೊತೆಯಲ್ಲಿ ಇದ್ದಾಗ ಆದ
ಸನ್ನಿವೇಶದ ನೋವುಗಳು
ಮರುಕಳಿಸಿದರು ಕಳಿಸದಿದ್ದರು
ಹ್ರುದಯ ಹಗುರ
ಇದೆ ಸಾಗುವ ಪಯಣದ ದೂರ

( ಚಿತ್ರಸೆಲೆ : sloanreview.mit.edu )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: