ಡಿಸೆಂಬರ್ 24, 2019

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಕಿರಿಯರಾದಡೇನು ಹಿರಿಯರಾದಡೇನು ಅರಿವಿಂಗೆ ಹಿರಿದು ಕಿರಿದುಂಟೆ. (1115-240) ( ಕಿರಿಯರ್+ಆದಡೆ+ಏನು; ಕಿರಿಯರ್=ವಯಸ್ಸಿನಲ್ಲಿ ಚಿಕ್ಕವರು; ಆದಡೆ=ಆದರೆ; ಏನು=ಪ್ರಶ್ನೆಯನ್ನು ಮಾಡುವಾಗ ಬಳಸುವ ಪದ/ಯಾವುದು; ಹಿರಿಯರ್+ಆದಡೆ+ಏನು; ಹಿರಿಯರ್=ವಯಸ್ಸಿನಲ್ಲಿ ದೊಡ್ಡವರು; ಅರಿವು=ತಿಳುವಳಿಕೆ/ವಿವೇಕ; ಅರಿವಿಂಗೆ=ತಿಳುವಳಿಕೆಗೆ/ವಿವೇಕಕ್ಕೆ; ಹಿರಿದು=ದೊಡ್ಡದು/ಮಿಗಿಲಾದುದು/ಹೆಚ್ಚಾದುದು; ಕಿರಿದು+ಉಂಟೆ;...