ಕಡಲೆ ಉದುರು ಬ್ಯಾಳಿ ಪಲ್ಯ

– ಸವಿತಾ.

ಉದುರು ಬೇಳೆ, ಕಡಲೆ, chickpea

ಬೇಕಾಗುವ ಸಾಮಾನುಗಳು

 • ಕಡಲೆಬೇಳೆ – 1 ಬಟ್ಟಲು
 • ಹಸಿ ಮೆಣಸಿನಕಾಯಿ – 3
 • ಬೆಳ್ಳುಳ್ಳಿ – 5-6 ಎಸಳು
 • ಜೀರಿಗೆ – 1 ಚಮಚ
 • ಕರಿಬೇವು – 7-8 ಎಲೆ
 • ಸಾಸಿವೆ – 1/2 ಚಮಚ
 • ಇಂಗು – 1/4 ಚಮಚ
 • ಹುಣಸೆ ಹಣ್ಣಿನ ರಸ – 2 ಚಮಚ
 • ಬೆಲ್ಲ – 1 ಚಮಚ
 • ಒಣ ಕೊಬ್ಬರಿ ತುರಿ – 2-3 ಚಮಚ
 • ಎಣ್ಣೆ – 5-6 ಚಮಚ
 • ಅರಿಶಿಣ – ಸ್ವಲ್ಪ
 • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ವಿದಾನ

ಕಡಲೆಬೇಳೆ 2-3 ಗಂಟೆ ಕಾಲ ನೆನೆಯಲು ಇಡಬೇಕು. ನೆನೆಸಿದ ಕಡಲೆಬೇಳೆ, ಹಸಿ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ತರಿ ತರಿಯಾಗಿ ಸ್ವಲ್ಪ ರುಬ್ಬಿಕೊಳ್ಳಿ. ಎಣ್ಣೆ ಬಿಸಿ ಮಾಡಿ ಒಗ್ಗರಣೆ ಮಾಡಿ. ಸಾಸಿವೆ, ಕರಿಬೇವು, ಇಂಗು ಹಾಕಿ ಕೈಯಾಡಿಸಿ. ನಂತರ ರುಬ್ಬಿದ ಕಡಲೆಬೇಳೆ ಮಿಶ್ರಣ ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು, ಅರಿಶಿಣ, ಹುಣಸೆ ರಸ ಮತ್ತು ಬೆಲ್ಲ ಹಾಕಿ ಚೆನ್ನಾಗಿ ಹುರಿಯಿರಿ. ಒಣ ಕೊಬ್ಬರಿ ತುರಿ ಸೇರಿಸಿ ಕೈಯಾಡಿಸಿ. ಕಡಲೆಬೇಳೆ ತೇವಾಂಶ ಹೋಗಿ ಉದುರು ಆಗಬೇಕು. ಆಗ ಒಲೆ ಆರಿಸಿ ಇಳಿಸಿ.

ಕೂಡಲೇ ತಿನ್ನುವುದಾದರೆ ಕತ್ತರಿಸಿದ ಕೊತ್ತಂಬರಿ ಬೇಕಾದರೆ ಸ್ವಲ್ಪ ಸೇರಿಸಬಹುದು. ಇದನ್ನು 2-3 ದಿನ ಇಟ್ಟು ಕೂಡ ತಿನ್ನಬಹುದು ( 2-3 ದಿನ ಇಟ್ಟು ತಿನ್ನುವುದಾದರೆ ಕೊತ್ತಂಬರಿ ಸೊಪ್ಪು ಸೇರಿಸಬೇಡಿ. ಹಾಳಾಗುವ ಸಾದ್ಯತೆ ಇರುತ್ತದೆ). ಪಲ್ಯವನ್ನು ಜೋಳದ ರೊಟ್ಟಿ, ಚಪಾತಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: