ಕವಿತೆ: ನೆನಪಿನಂಗಳದಿ ಮರೆವು

– .

memories, ನೆನಪು, ಮರೆವು,

ಅಂತ್ಯವಿಲ್ಲದ ಉನ್ಮಾದದ ಕ್ಶಣಗಳಿವೆ
ಲೆಕ್ಕಿಸಲಾಗದ ಕಿನ್ನತೆಯ ಕ್ಶಣಗಳಿವೆ
ಯಾರಿಂದ ಪ್ರಿಯಗೊಳಿಸಲಿ ರಜನಿಯ ಕಿರಣಗಳ
ನಾ ಏನು ಮರೆಯಲಿ… ಏನು ನೆನಪಿಟ್ಟುಕೊಳಲಿ

ಸಂತಸದ ಕಣ್ಣೀರು ತರಿಸುವುದು ನೆನಪು
ಹ್ರುದಯ ಬಾರವಾಗಿಸುವುದು ಅಳುವು
ವ್ಯರ‍್ತದಿನ ಕಳೆಯುವಾಗ ಯಾರ ದೂಶಿಸಲಿ
ನಾ ಏನು ಮರೆಯಲಿ… ಏನು ನೆನಪಿಟ್ಟುಕೊಳಲಿ

ವಿಶಾದವಿದೆ ಎರಡರಿಂದಲೂ
ಚಿಂತೆಯಿಲ್ಲವಾದರೂ ಪಡೆದುಕೊಂಡಿರುವೆ
ಸೂಜಿದಾರದಿ ನನ್ನವರ ಪ್ರಿಯಗೊಳಿಸುವೆ
ನಾ ಏನು ಮರೆಯಲಿ… ಏನು ನೆನಪಿಟ್ಟುಕೊಳಲಿ

(ಚಿತ್ರ ಸೆಲೆ: healthtap.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: