ಕರಿಬೇವು ಸಾರು (ಕುಳಂಬು)

– ಸವಿತಾ.

ಸಾರು, ಕುಳಂಬು, kuzhambu

ಬೇಕಾಗುವ ಸಾಮಾನುಗಳು

  • ಕರಿಬೇವು ಎಲೆ – 1 ಬಟ್ಟಲು
  • ಹಸಿ ಕೊಬ್ಬರಿ ತುರಿ – 1/2 ಬಟ್ಟಲು
  • ಕಡಲೆ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಕೊತ್ತಂಬರಿ ಕಾಳು – 1 ಚಮಚ
  • ಮೆಂತೆ ಕಾಳು – 1/2 ಚಮಚ
  • ಒಣ ಮೆಣಸಿನ ಕಾಯಿ 3-4
  • ಎಣ್ಣೆ – 3 ಚಮಚ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಹುಣಸೆ ಹಣ್ಣು – 1 ನಿಂಬೆ ಹಣ್ಣು ಗಾತ್ರ
  • ಬೆಲ್ಲ – 1 ಚಮಚ
  • ಅರಿಶಿಣ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ಇಂಗು – ಸ್ವಲ್ಪ

ಮಾಡುವ ಬಗೆ

ಕರಿಬೇವು ಎಲೆ ಬಿಡಿಸಿ ತೊಳೆದು ಇಟ್ಟುಕೊಳ್ಳಿ. ಎಲ್ಲ ತೇವ ಆರಲು ಇಡಬೇಕು. ಹುಣಸೆ ಹಣ್ಣು ನೀರಿನಲ್ಲಿ ನೆನೆ ಹಾಕಿ ಇಟ್ಟುಕೊಳ್ಳಿ.

ಒಂದು ಬಾಣಲೆ ಬಿಸಿ ಮಾಡಿ , ಕಡಲೆ ಬೇಳೆ , ಉದ್ದಿನ ಬೇಳೆ, ಕೊತ್ತಂಬರಿ ಕಾಳು, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಒಲೆ ಆರಿಸಿ . ಕರಿಬೇವು ಹಾಕಿ ಚೆನ್ನಾಗಿ ಕೈಯಾಡಿಸಿ ಹಾಗೇ ಹತ್ತು ನಿಮಿಶ ಬಿಡಿ. ಆರಿದ ನಂತರ ಸ್ವಲ್ಪ ಉಪ್ಪು, ಹಸಿ ಕೊಬ್ಬರಿ ತುರಿ ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಮೆಂತೆ ಕಾಳು ಹಾಕಿ ಸ್ವಲ್ಪ ಹುರಿಯಿರಿ. ಉಪ್ಪು ಅರಿಶಿಣ ಹಾಕಿ, ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಹುಣಸೆ ರಸ, ಬೆಲ್ಲ ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ಅನ್ನದ ಜೊತೆ ಕರಿಬೇವು ಎಲೆ ಸಾರು ಊಟ ಮಾಡಿ.

ಇದು ಮೂಲ ತಮಿಳುನಾಡು ಸಾರು, ಇದನ್ನು ಅಲ್ಲಿ ಕುಳಂಬು ಅಂತ ಕರೆಯುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: