ಬದುಕಿನ ಸೋಲು-ಗೆಲುವಿನಾಟ!

ಚಂದನ (ಚಂದ್ರಶೇಕರ.ದ.ನವಲಗುಂದ).

Winning and Loosing

ಸೋಲಿನ  ರುಚಿಯನ್ನು  ಯಾರು  ಕಂಡಿಲ್ಲ? ಹಾಗಂತ ಸೋತವರೆಲ್ಲ ಗೆಲುವಿನ ರುಚಿ ಕಂಡೇ ಇಲ್ಲವಾಅತವಾ ಗೆದ್ದವರೆಲ್ಲರೂ ಒಂದೇ ಬಾರಿಗೆ ಗೆಲುವನ್ನು ಸಂಬ್ರಮಿಸಿ ಇತಿಹಾಸ ನಿರ‍್ಮಿಸಿದವರಾ? ಇತಿಹಾಸ ಬರೆದಿರುವ ನಮ್ಮ ದೇಶದ ಪದ್ಮಶ್ರೀ ಮಿಲ್ಕಾ ಸಿಂಗ್ ಇವರನ್ನು  ‘ಹಾರುವ ಸಿಕ್’(Flying Sikh) ಎಂಬ ಬಿರುದನ್ನು ನೀಡಲಾಗಿದ್ದು, ಅವರ ಸಾದನೆಯ ಹಿಂದೆ ಅವರ ಪರಿಶ್ರಮ, ಇಚ್ಚಾಶಕ್ತಿ, ಆಸಕ್ತಿ, ತ್ಯಾಗಗಳಿರುತ್ತವೆ. ಇವತ್ತು ಇಡೀ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ, ಅತೀ ಕಡಿಮೆ ಸಮಯದಲ್ಲಿ ಓಡುವಉಸೇನ್ ಬೋಲ್ಟ್”  ಇತಿಹಾಸ ರಚಿಸಿದ್ದಾರೆಂದರೆ ಎಶ್ಟು ಬಾರಿ ಮೈದಾನದಲ್ಲಿ ಬಿದ್ದಿರಬೇಕು? ಎಶ್ಟು ಬಾರಿ ಪೆಟ್ಟು ತಿಂದಿರಬೇಕು? ಇವರ ದನಾತ್ಮಕ ಶಕ್ತಿ/ದನಾತ್ಮಕ ಮನೋಬಾವ ಅವರು ನಿಗದಿಪಡಿಸಿಕೊಂಡಿರುವ ಅತವಾ ಕಂಡಿರುವ ಕನಸನ್ನು ನನಸಾಗಿಸಲು ಸಹಕಾರಿಯಾಗಿರುವುದೆಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ. ಅದಕ್ಕೆ ಒಂದು ಕಡೆ ನಮ್ಮ ನೆಚ್ಚಿನ ಮಾಜಿ ರಾಶ್ಟ್ರಪತಿ ಶ್ರೀ. .ಪಿ.ಜೆ ಅಬ್ದುಲ್ ಕಲಾಂ ಅವರು “ಬರೀ ಯಶಸ್ವಿ ಕತೆಗಳನ್ನಶ್ಟೆ ಓದಬೇಡಿಅಲ್ಲಿ  ನಿಮಗೆ ಕೇವಲ ಒಂದು ಸಂದೇಶವಶ್ಟೆ ದೊರೆಯಬಹುದು, ಸೋತವರ ಬದುಕಿನ ಕತೆಗಳನ್ನೂ ಓದಿ, ಅಲ್ಲಿ ನಿಮಗೆ ಹೊಸ ಆಲೋಚನೆ ದೊರಕಿ, ಹೊಸತನ್ನು ಮಾಡಲು ಪ್ರೇರಣೆ ಸಿಗಬಹುದುಎಂದು ಹೇಳಿರುವುದು ಹಾಗೂ ಅದರಂತೆ ಕಾರ‍್ಯತತ್ಪರರಾಗಬೇಕಾದ ಅವಶ್ಯಕತೆ ಇಂದಿನ ವಿದ್ಯಾರ‍್ತಿ, ಯುವಪೀಳಿಗೆಗೆ ಇದೆ

ಇಂದಿನ ಕೆಲವು ವಿದ್ಯಾರ‍್ತಿಗಳಿಗೆ ಅದರಲ್ಲೂ ಒಮ್ಮೆಯೋಎರಡನೆ ಬಾರಿಯೋ ತಮ್ಮ ಕೆಲಸದಲ್ಲಿ ಸೋತ ಯುವಕರಿಗೆ ಯಾಕೆ ಏನು ಮಾಡ್ಲಿಕ್ಕೆ ಮನಸಾಗ್ತಾ ಇಲ್ಲ ಅಂತಾ ಕೇಳಿದರೆ, ‘ನಾನು ಸೋತು ಸುಣ್ಣವಾಗಿಬಿಟ್ಟಿದ್ದೇನೆ. ಏನ್ ಮಾಡಿದ್ರೂ ಕೈಗೆ ಹತ್ತುತ್ತಿಲ್ಲನನ್ನ ಕೈಗುಣ ಚೆನ್ನಾಗಿಲ್ಲ,. ಮುಂದೇನು ಮಾಡಬೇಕು ಅಂತ ತಿಳಿಯದೆ ಪ್ರಯತ್ನ ಬಿಟ್ಟು ಬಿಟ್ಟಿದ್ದೇನೆ’ ಎಂದು ಹೇಳುವವರನ್ನು ಹಾಗೂ ಈ ಒಂದು ನೆಪದಿಂದ ಸ್ವಯಂ ಪ್ರೇರಣೆಯೂ ಇಲ್ಲದೇ ಆಲಸಿಯಾಗಿ, ‘ತನ್ನದೇ ಸರಿ’ ಎಂಬ ದೋರಣೆಯೊಂದಿಗೆ ಕುಳಿತುಬಿಡುತ್ತಾರೆಇಂತಹವರಿಗೆ ಯಾರು ಏನೇ ಹೇಳಿದರೂ ತಮ್ಮ ರುಣಾತ್ಮಕ ಆಲೋಚನೆಗೆ ಅಂಟಿಕೊಂಡು ಬಿಡುತ್ತಾರೆ.

ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಸ್ಯೆಗಳು ಇರುತ್ತವೇನೋ ಸರಿ. ಆದರೆ, ಸಮಸ್ಯೆಗಳತ್ತ ನೋಡುತ್ತಿದ್ದರೆ, ತಮಗೆ ದೊರಕಿರುವ ಅವಕಾಶಗಳ ಕಡೆಗೆ, ತಮಗೆ ದೊರೆತಿರುವ ಮೂಲಬೂತ ಸೌಕರ‍್ಯಗಳು, ಇತರರಿಗಿಂತ ತಮಗೆ ಇರುವ ಸೌಲಬ್ಯಗಳತ್ತ ಒಮ್ಮೆ ಗಮನ ಹರಿಸಿ ಚಿಂತನೆ ಮಾಡಿದಾಗ ಆ ರುಣಾತ್ಮಕ ಆಲೋಚನೆ ದನಾತ್ಮಕ ಆಲೋಚನೆಯಾಗಿ ಮಾರ‍್ಪಡಿಸಲು ಸಾದ್ಯ. ಒಬ್ಬ ಹುಡುಗ ತನ್ನಲ್ಲಿರುವುದು ಬರೀ ಸೈಕಲು, ಎಲ್ಲ ಕಡೆಗೆ ತಿರುಗಾಡಲು ಸಾದ್ಯವಿಲ್ಲ ಎಂದು ಅಳುತ್ತ ಕುಳಿತರೆ, ನಾಲ್ಕು ಗಾಲಿ ಇಂದನದ ದೊಡ್ಡ ಹೊಟ್ಟೆ ಹೊತ್ತಿರುವ ವಾಹನ ಇದ್ದರೂ, ವಾಹನ ಓಡಲು ಇಂದನಕ್ಕೆ ದುಡ್ಡು ಇಲ್ಲವೆಂದು ಪರಿತಪಿಸಲೂಬಹುದು. ನಮಗಿರುವ ಸೌಕರ‍್ಯಗಳನ್ನು ಸದುಪಯೋಗಿಸಿಕೊಂಡು ನಾವು ಎಶ್ಟು ಉತ್ತಮ ಪಲಿತಾಂಶ ಕೊಡಬಹುದೆಂಬ ವಿಚಾರವನ್ನು ಮನಸಿನಲ್ಲಿಟ್ಟುಕೊಂಡು, ನಾವಂದುಕೊಡ ಅತವಾ ನಾವು ಹೊಂದಿರುವ ಗುರಿಯೆಡೆಗೆ ಸತತ ಪರಿಶ್ರಮ, ಶ್ರದ್ದೆಯಿಂದ ಪ್ರಯತ್ನ ಮಾಡಿದರೇ ಕಂಡಿತ ಒಳ್ಳೆಯ ಪಲಿತಾಂಶ ಶತಸಿದ್ದವಾಗಿರುತ್ತದೆ.  

ಸೋಲುಂಡಾಗ ಅದಕ್ಕೆ ಕಾರಣ ಪರಾಮರ‍್ಶೆ ಮಾಡಿತಪ್ಪುಗಳು ಮರುಕಳಿಸದಂತೆ ಕಾಳಜಿ ವಹಿಸುವುದು ಜಾಣತನ. ಕೆಲವು ಬಾರಿ ನಮ್ಮ ತಪ್ಪುಗಳನ್ನು ಸುದಾರಿಸಿಕೊಂಡು ಮತ್ತೆ ಪ್ರಯತ್ನಿಸಿದಾಗಲೂ ನಾನು ಸೋತೆ ಎಂದವರೂ ಇದ್ದಾರೆ. ಆದರೆ, ಸೋಲು ಅನ್ನೋದು ಶತ್ರುವಿನ ಹಾಗೆ. ರಾಹುಕೇತುಗಳ ಹಾಗೆ. ಸೋಲನ್ನು ಮೆಟ್ಟಿ ನಿಲ್ಲುವ ದೈರ‍್ಯ, ಚಾಕಚಕ್ಯತೆ ನಮ್ಮಲ್ಲಿ ರೂಡಿಸಿಕೊಳ್ಳಬೇಕು. ನಮ್ಮ ನಡುವೆಯೇ ಇರುವ ಇನ್‍ಪೋಸಿಸ್‍ನ ಶ್ರೀನಾರಾಯಣ ಮೂರ‍್ತಿಶ್ರೀ. ನಂದನ್ ನಿಲೇಕಣಿ, ಶ್ರೀಮತಿ. ಸುದಾಮೂರ‍್ತಿ, ರೆಡ ಬಸ್ ಡಾಟ್ ಇನ್ ಶ್ರೀ. ಪಣೀಂದ್ರ ರೆಡ್ಡಿ ಮುಂತಾದವರಾಗಿರಬಹುದು, ಎಂಟಿಆರ್ ಮೈಯಾಸ್ ಆಗಿರಬಹುದು, ಇವರೆಲ್ಲರ ಯೋಜನೆಗಳು ಯಶಸ್ವಿಯಾಗಿವೆ ಎಂದರೆ ಇವುಗಳ ಹಿಂದೆ ಅವರ ಪರಿಶ್ರಮಶ್ರದ್ದೆ, ಆಸಕ್ತಿ, ತ್ಯಾಗ ಹಾಗೂ ಇವೆಲ್ಲರದರ ಜೊತೆಗೆ ತಾಳ್ಮೆ ಬಹುಮುಕ್ಯವಾಗಿರುವುದನ್ನು ಗಮನಿಸಲೇಬೇಕು

ಇತ್ತೀಚಿಗೆ ನಾವೆಲ್ಲ ಚೈನಾದ ವುಹಾನ್ ಎಂಬಲ್ಲಿಂದ ಬಂದ ಕರೋನಾ ವೈರಸ್ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಚೈನಾದಿಂದ ಬಂದಿದೆಯೋ, ಇನ್ನೆಲ್ಲಿಂದ ಬಂದಿದಿಯೋ ಆನಂತರ ನೋಡೋಣ (ಮೊದಲು ಅದನ್ನು ಎಲ್ಲರೂ ದೈರ‍್ಯದಿಂದ ಎದುರಿಸೋಣ. ಸರ‍್ಕಾರದ ನಿಯಮಗಳನ್ನು ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಂಡಿರೋಣ. ಬರಬಹುದಾದ ಗೋರ ಸನ್ನಿವೇಶಗಳಿಗೆ ಸಿದ್ದರಾಗೋಣ). ನೀವೆಲ್ಲರೂ ಚೈನಾದ ಪ್ರತಿಶ್ಟಿತ, ಮಿಲಿಯನ್ ಡಾಲರ್ ‘ಅಲಿಬಾಬಾ’ ಕಂಪನಿಯ ಜ್ಯಾಕ್ ಮಾ ಅವರ ಹೆಸರು ಕೇಳಿರಬಹುದು. ತಮ್ಮ ಪ್ರಾತಮಿಕ ದಿನಗಳಲ್ಲಿ ಪಟ್ಟಣ ಪ್ರದೇಶದಿಂದ ಸ್ವಂತ ಊರಿಗೆ ಹೋಗಲು ದುಡ್ಡಿರದೇ ತೊಂದರೆ ಅವರು ಅನುಬವಿಸಿದ್ದರಂತೆ. ಆ ಮನುಶ್ಯನ ಜಾಣ್ಮೆಹಟ, ತ್ಯಾಗ ಇವತ್ತು ಅವರನ್ನು ವಿಶ್ವದ ಸಿರಿವಂತರಲ್ಲೊಬ್ಬರನ್ನಾಗಿ ಮಾಡಿದೆ!

ಆದ್ದರಿಂದ, ಈ ಕೆಲವು ವಿಶಯಗಳ ಬಗ್ಗೆ ಜಾಗ್ರತೆಯಿಂದ ಇದ್ದರೆ ಗುರಿ ತಲುಪುವುದು ನಿಶ್ಚಿತ

  • ಇನ್ನೇನು ಸೋತು ಹೋದೆ ಎಂದು ಕೈಚೆಲ್ಲಿ ಕುಳಿತುಕೊಳ್ಳಲೇಬಾರದು.
  • ಸೋಲೊಪ್ಪಿಕೊಂಡರೆ ಅಪಾಯ. ಪ್ರಯತ್ನಗಳು ನಿಲ್ಲಬಾರದು.
  • ತೊಂದರೆ, ದುಕ್ಕ ದಿನಂಪ್ರತಿ ಸಾವು ನೋವು ಇದೆ ಎಂದು ನಾವು ಕಿನ್ನತೆಗೆ ಒಳಗಾಗಬಾರದು.
  • ಮುನ್ನುಗ್ಗಿದಾಗಲೇ ತಿರುಗಿ ನೋಡಲು ಸಮಯವಿರದಶ್ಟು ಮುಂದಕ್ಕೆ ಸಾಗಿಬಿಡಬಹುದು
  • ಸೋತಾಗ ಮಾತನಾಡುವವರು ಬಹಳ, ಗೆದ್ದಾಗ ನೀವು ಕರೆಯದಿದ್ದರೂ ಹತ್ತಿರ ಬರುವವರು ಬಹಳಇಬ್ಬರಿಂದಲೂ ಅಂತರವಿರಿಸಿಕೊಂಡಿರುವುದು ಒಳಿತು.
  • ನಮ್ಮ ಮೇಲೆ ನಮಗೆ ಆತ್ಮ ವಿಶ್ವಾಸ ಇರಲಿ. ನಮ್ಮ ಸಾದನೆ ಬಗ್ಗೆ ಹೆಮ್ಮ ಇರಲಿ. ಸಾದಿಸುತ್ತೇನೆ ಎನ್ನುವವರ ಮೇಲೆ ಹಲವಾರು ಬರವಸೆಯ ಕಣ್ಣುಗಳು ನೆಟ್ಟಿರುತ್ತವೆ ಎಂಬುದನ್ನು ಮರೆಯಬಾರದು.

ಪಾಲಕರು, ಗೆಳೆಯರು, ಹಿರಿಯರು ಸಹ ಇಂತಹ ಪ್ರಯತ್ನವಾದಿಗಳನ್ನು ಒಳ್ಳೆಯ ಕೆಲಸಕ್ಕೆ ಸದಾ ಪ್ರೇರೇಪಿಸುತ್ತಾ, ಗುರಿ ಸಾದಿಸಲು ಇಂತವರ ಬೆನ್ನು ತಟ್ಟಿ, ಮುನ್ನುಗ್ಗಲು ಹಿತನುಡಿಗಳಿಂದಲೋ, ಕೆಲವೊಮ್ಮೆ ಆರ‍್ತಿಕವಾಗಿ ಇಲ್ಲವೇ ಮಾನಸಿಕವಾಗಿ ಸದ್ರುಡರನ್ನಾಗಿಸಲು ತಮ್ಮ ಕೈಲಾದಶ್ಟು ಪ್ರಯತ್ನಿಸಬೇಕು. ಇದಾವುದೂ ತಮ್ಮಿಂದ ಆಗುವುದಿಲ್ಲವೆಂದರೆ ಕನಿಶ್ಟ ಕಾಲೆಳೆಯುವುದನ್ನಾದರೂ ಬಿಟ್ಟು ತಮ್ಮಶ್ಟಕ್ಕೆ ತಾವೇ ಇರುವುದು ಸೂಕ್ತಪ್ರತಿಯೊಬ್ಬರ ಗೆಲುವನ್ನು ನಾವು ಸಂಬ್ರಮಿಸೋಣ. ಸೋಲಿನಿಂದ ಒಳ್ಳೆಯ ಪಾಟ ಕಲಿಯೋಣ.

ಪ್ರತಿಯೊಬ್ಬರು ಜೀವನದ ಪಾಟ ಕೊನೆಯವರೆಗೂ ಕಲಿಯುತ್ತಲೇ ಇರಬೇಕು. ಅಲ್ಲವೇ!

(ಚಿತ್ರ ಸೆಲೆ: pexels.com

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. ಚಂದ್ರಶೇಖರ says:

    ಪ್ರಕಟಿಸಿ ಪ್ರೋತ್ಸಾಹಿಸಿದ ಹೊನಲು ತಂಡಕ್ಕೆ ಧನ್ಯವಾದಗಳು.

    • Rajashekhar G Bhoj says:

      ಕಹಿಯನ್ನು ಉಂಡು
      ,ಸಹಿಸಿ,ತಾಳ್ಮೆಯಿಂದ ಸಿಹಿಯನ್ನು ಸಮಾಜಕ್ಕೆ ತಿಳಿಸಿದ್ದೀರಿ.
      ಧನ್ಯವಾದಗಳು.
      ರಾ ಗು ಭೋಜ
      ಬೆಳಗಾವಿ.

  2. Chidambar says:

    good inspirational article.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *