ಕಡು ಬಿಸಿಲಿಗೆ ತಂಪಾದ ‘ಗೋಳಿ ಸೊಪ್ಪಿನ ಮೊಸರು ಬಜ್ಜಿ’
– ಕಲ್ಪನಾ ಹೆಗಡೆ.
ಏನೇನು ಬೇಕು?
ಒಂದು ಹಿಡಿ ಗೋಳಿ ಸೊಪ್ಪು
ಅರ‍್ದ ಹೋಳು ಕಾಯಿ
ಅರ‍್ದ ಲೀಟರ್ ಮೊಸರು
2 ಹಸಿಮೆಣಸಿನಕಾಯಿ
1 ಈರುಳ್ಳಿ
1 ಒಣಮೆಣಸಿನಕಾಯಿ
ಸ್ವಲ್ಪ ಎಣ್ಣೆ
ಅರ‍್ದ ಚಮಚ ಸಾಸಿವೆ
ಅರ‍್ದ ಚಮಚ ಬೆಲ್ಲ ಅತವಾ ಸಕ್ಕರೆ
ರುಚಿಗೆ ತಕ್ಕಶ್ಟು ಉಪ್ಪು
ಮಾಡುವ ವಿದಾನ
ಮೊದಲು ಗೋಳಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಆನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ಸ್ವಲ್ಪ ಆರಿದ ನಂತರ ಒಂದು ಪಾತ್ರೆಗೆ ಹಾಕಿ ಜೊತೆಗೆ ಕಾಯಿತುರಿಯನ್ನು ಮಿಕ್ಸಿ ಮಾಡಿ ಹಾಕಿಕೊಳ್ಳಿ. ಆನಂತರ 2 ಸೌಟು ಮೊಸರು ಜೊತೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕಲಸಿ ಆಮೇಲೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಹಸಿಮೆಣಸಿನಕಾಯಿ, ಉದ್ದಿನಬೇಳೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಒಗ್ಗರಣೆ ಮಾಡಿದ ಒಣ ಮೆಣಸಿನಕಾಯಿಯನ್ನು ಕೈಯಿಂದ ನುರಿದು ರುಚಿಗೆ ತಕ್ಕಶ್ಟು ಉಪ್ಪು, ಸಕ್ಕರೆ ಅತವಾ ಬೆಲ್ಲ ಹಾಕಿ ಸೌಟಿನಿಂದ ಮಿಕ್ಸ್ ಮಾಡಿ, ತಯಾಸಿರಿದ ಗೋಳಿ ಸೊಪ್ಪಿನ ಮೊಸರು ಬಜ್ಜಿಯನ್ನು ಅನ್ನದೊಂದಿಗೆ ಸವಿಯಲು ನೀಡಿ. (ಸೂಚನೆ: ಮೊಸರನ್ನು ಒಂದೇ ಉಪಯೋಗಿಸಿಯೂ ಮಾಡಬಹುದು. ಜೊತೆಗೆ ಕಾಯಿ ಹಾಕಿ ಮಾಡಿದರೆ ಇನ್ನೂ ಸ್ವಲ್ಪ ರುಚಿ ಹೆಚ್ಚಿರತ್ತೆ. ಇನ್ನೊಂದು ತಮ್ಮ ಗಮನಕ್ಕೆ, ಮಲೆನಾಡಿನ ಕಡೆ ಮೊಸರು ಬಜ್ಜಿಗೆ ಹಶಿ ಅಂತ ಕರಿಯುತ್ತಾರೆ).
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು