ಆಂದ್ರ ಶೈಲಿ ಸೊಪ್ಪು ಸಾರು

– ಕಿಶೋರ್ ಕುಮಾರ್.

ಏನೇನು ಬೇಕು

  • ಚಿಲಕವರೆ ಸೊಪ್ಪು – 1 ಕಟ್ಟು
  • ಮೆಂತ್ಯ ಸೊಪ್ಪು – 1 ಕಟ್ಟು
  • ಅಡುಗೆ ಎಣ್ಣೆ – ಸ್ವಲ್ಪ
  • ಈರುಳ್ಳಿ – 3
  • ಬೆಳ್ಳುಳ್ಳಿ – 20 ಎಸಳು
  • ಹಸಿಮೆಣಸಿನಕಾಯಿ – 6
  • ಟೊಮೆಟೊ – 4
  • ಸಾಸಿವೆ – 1 ಚಮಚ
  • ಜೀರಿಗೆ – 1 ಚಮಚ
  • ಕರಿಬೇವು – 10 ಎಲೆ
  • ಉಪ್ಪು – ಸ್ವಲ್ಪ

ಮಾಡುವ ಬಗೆ

ಸೊಪ್ಪನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ 2 ಚಮಚ ಅಡುಗೆ ಎಣ್ಣೆ ಸೇರಿಸಿ ಒಲೆ ಹಚ್ಚಿ. ಕಾದ ಎಣ್ಣೆಗೆ ಕತ್ತರಿಸಿದ (2) ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ, ನಂತರ 10 ಬೆಳ್ಳುಳ್ಳಿ ಎಸಳು, ಕತ್ತರಿಸಿದ ಟೊಮೆಟೊ, ಹಸಿ ಮೆಣಸಿನಕಾಯಿ ಹಾಗೂ ಕತ್ತರಿಸಿದ ಸೊಪ್ಪು ಸೇರಿಸಿ 3 ನಿಮಿಶ ಹುರಿಯಿರಿ. ಈಗ ಸ್ವಲ್ಪ ನೀರು ಸೇರಿಸಿ 10 ರಿಂದ 15 ನಿಮಿಶ ಕುದಿಸಿ ಒಲೆ ಆರಿಸಿ. ತಣ್ಣಗಾದ ಮೇಲೆ ನೀರನ್ನು ಸೋಸಿ, ಸೊಪ್ಪನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿಕೊಂಡು ರುಬ್ಬಿಕೊಳ್ಳಿ ( ತೀರಾ ನುಣ್ಣಗೆ ರುಬ್ಬಬಾರದು).

ಒಂದು ಪಾತ್ರೆಗೆ 2 ಚಮಚ ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಕತ್ತರಿಸಿದ (1) ಈರುಳ್ಳಿ ಹಾಗೂ ಜಜ್ಜಿದ 10 ಬೆಳ್ಳುಳ್ಳಿ ಎಸಳು ಸೇರಿಸಿ ಒಗ್ಗರಣೆ ಮಾಡಿ. ನಂತರ ರುಬ್ಬಿಕೊಂಡ ಸೊಪ್ಪನ್ನು ಒಂದು ಪಾತ್ರೆಗೆ ಹಾಕಿ, ಒಗ್ಗರಣೆ ಸೇರಿಸಿ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ 4 ನಿಮಿಶ ಬೇಯಿಸಿ. ಈಗ ಆಂದ್ರ ಶೈಲಿ ಸೊಪ್ಪು ಸಾರು ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks