ಬದುಕು ಬದಲಾಯಿಸಿದ ಕೊರೊನಾ

– ಪ್ರಕಾಶ್‌ ಮಲೆಬೆಟ್ಟು.

ಕೊರೊನಾ, Corona
ಕೊರ‍ೊನಾದಿಂದ ಕವಿದಿರ‍ುವ ಅಂದಕಾರ‍‍ವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮೊನ್ನೆ ಹಚ್ಚಿದ ಬೆಳಕು ನಮ್ಮ ಮನೆ ಮನವನ್ನೇನೋ ತಾತ್ಕಾಲಿಕವಾಗಿ ಬೆಳಗಿತು. ಆದರ‍ೆ ಕೊರ‍ೊನಾ ಹಚ್ಚಿರ‍ುವ ಕಿಚ್ಚು ಇದೆಯಲ್ವಾ ಅದು ಸುಲಬವಾಗಿ ಆರ‍ುವ ಯಾವುದೇ ಲಕ್ಶಣ ಕಾಣಿಸುತ್ತಿಲ್ಲ. ಯಾಕಾಗಿ ಈ ಪೀಳಿಗೆಯಲ್ಲಿ ನಾವು ಹುಟ್ಟಿದ್ದೇವೆಯೋ ಎಂದು ನಮ್ಮನ್ನು ನಾವೇ ಶಪಿಸಿಕೊಳ್ಳುವಶ್ಟು ಕೊರ‍ೊನಾದ ಬೀಕರ‍‍ತೆ ನಮ್ಮನ್ನು ನಿದಾನವಾಗಿ ಕಾಡಲಾರ‍ಂಬಿಸಿದೆ. ಅಮೇರಿಕ, ಇಟಲಿ, ಸ್ಪೇನ್, ಯುಕೆಯಂತಹ ದೇಶಗಳಲ್ಲಿ ಕೊರ‍ೊನಾ ಅಕ್ಶರ‍‍ಶಹ ತಾಂಡವವಾಡುತ್ತಿದೆ. ಸಾವಿನ ಬಯ ಮಾನವತೆಯನ್ನು ಮರ‍ೆಯುವಂತೆ ಮಾಡಿ ಬಿಟ್ಟಿದೆ. ಪಂಜಾಬಿನಲ್ಲಿ ನಡೆದ ಗಟನೆಯನ್ನೇ ಹೇಳೋದಾದರ‍ೆ ಕೊರ‍ೊನಾದಿಂದ ಏಪ್ರ‍ಿಲ್ 7 ರ‍ಂದು ಒಬ್ಬ ನಿವ್ರ‍‍ುತ್ತ ಇಂಜಿನಿಯರ‍್ ಸಾಯುತ್ತಾರ‍ೆ. ವೈದ್ಯಕೀಯ ಶಿಕ್ಶಣ ಪಡೆಯುತ್ತಿರ‍ುವ ಅವರ‍‍ ಮಗಳ ಸಮೇತ ಯಾವೊಬ್ಬ ಸಂಬಂದಿಯೂ ಶವ ಸ್ವೀಕರ‍ಿಸಲು ಮುಂದೆ ಬರ‍ುವುದಿಲ್ಲ. ಕಡೆಗೆ ವಿದಿ ಇಲ್ಲದೆ ಜಿಲ್ಲಾಡಳಿತವೇ ಅಂತ್ಯಸಂಸ್ಕಾರ‍‍ ಮಾಡಿತ್ತು. ಇದು ಬಾರ‍‍ತದ ಕತೆಯಾದರ‍ೆ ಅನೇಕ ದೇಶಗಳಲ್ಲಿ ಕೊರ‍ೊನಾ ಪೀಡಿತ ಒಮ್ಮೆ ಆಸ್ಪತ್ರ‍ೆಗೆ ದಾಕಲಾದರ‍ೆ ಒಂದೋ ಗುಣಮುಕನಾಗಿ ಮನೆಗೆ ಹಿಂತಿರ‍ುಗುತ್ತಾನೆ. ಸತ್ತು ಹೋದರ‍ೆ ಅಂತಿಮ ದರ‍್ಶನ ಕೂಡ ಮನೆಯವರಿಗೆ ದೊರ‍‍ಕಲ್ಲ.

ಒಂದು ವೈರ‍‍ಸ್ ಮನುಕುಲದ ಅಹಂಕಾರ‍‍ಕ್ಕೆ ಸವಾಲಾಗಿಬಿಟ್ಟಿದೆ. ಮುಂದೇನು ಎಂದು ಹೇಳುವ ದೈರ‍‍್ಯ ಯಾರಿಗೂ ಇಲ್ಲ. ಯಾವ ಜೋತಿಶಿಗೂ ಗೊತ್ತಿಲ್ಲ, ಯಾವ ರ‍ಾಶ್ಟ್ರ‍‍ ನಾಯಕರಿಗೂ ಗೊತ್ತಿಲ್ಲ ನಾವು ಈ ಸಂಕಶ್ಟದಿಂದ ಪಾರ‍ಾಗುತ್ತೇವೋ ಇಲ್ಲವೋ ಎಂದು! ಕಾಪಾಡುವ ದೇವನ ಮಂದಿರ‍‍ಕ್ಕೂ ಕೂಡ ಹೋಗಲಾರ‍‍ದ ಸ್ತಿತಿಗೆ ಮಾನವ ಬಂದುಬಿಟ್ಟಿದ್ದಾನೆ. ಉಳಿದಿರ‍ೋದು ಬರ‍‍ವಸೆ ಮಾತ್ರ‍‍! ನಾವು ಪಾರ‍ಾಗಬಹುದೇನೋ ಎನ್ನುವ ವಿಶ್ವಾಸ. ಅದೇನೇ ಇರ‍‍ಲಿ ಕೊರ‍ೊನಾ ಉಂಟುಮಾಡಿರ‍ುವ ಅನಾಹುತಗಳು ಒಂದೇ ಎರ‍‍ಡೇ. ನವ ಬದುಕಿನ ಕನಸು ಕಾಣುತಿದ್ದ ಹೊಸ ಜೋಡಿಗಳ ಮದುವೆ ನಿಂತು ಹೋಗಿಬಿಟ್ಟಿದೆ. ಲಕ್ಶಗಟ್ಟಲೆ ಜನ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರ‍ೆ. ಮುಕ್ಯವಾಗಿ ಹಣಕಾಸಿನ ವಿಚಾರದಲ್ಲಿ ಮೇಲೆ ಏಳಲು ಸಾದ್ಯವೇ ಆಗದಂತೆ ಪೆಟ್ಟನ್ನು ಕೊರ‍ೊನಾ ಕೊಟ್ಟುಬಿಟ್ಟಿದೆ. ಹೇಗೆ ಲೆಕ್ಕಾಚಾರ‍‍ ಹಾಕಿದರ‍ೂ ನಾವೆಲ್ಲ ಹತ್ತು ವರ‍ುಶ ಹಿಂದಕ್ಕೆ ಹೋಗಿ ಬಿಟ್ಟಿದ್ದೇವೆ. ನಮ್ಮೆಲ್ಲರ‍ ಜೀವನದಲ್ಲಿ ಒಮ್ಮೆಲೇ ಹಣಕಾಸಿನ ಬಿಕ್ಕಟ್ಟು ಎದುರ‍ಾಗಿಬಿಟ್ಟಿದೆ. ಇದನ್ನು ಸಮರ‍‍್ತವಾಗಿ ನಾವು ಹೇಗೆ ಎದುರಿಸಬಹುದು? ಬಹುಶಹ ಈ ಪ್ರ‍‍ಶ್ನೆಗೆ ಉತ್ತರ‍‍ ಹುಡುಕುವುದು ತುಂಬಾ ಕಶ್ಟ . ಏಕೆಂದರ‍ೆ ಪ್ರ‍‍ತಿಯೊಬ್ಬರ‍ೂ ಒಂದು ಸರ‍‍ಪಳಿಯ ವ್ಯವಸ್ತೆಯ ಅಡಿಯಲ್ಲಿ ಬದುಕುತಿದ್ದೇವೆ. ಹಾಗಾಗಿ ಒಂದು ಸರ‍‍ಪಳಿ ತುಂಡಾದರ‍ೂ ಮತ್ತೊಬ್ಬರ‍‍ ಬದುಕು ಮೂರ‍ಾಬಟ್ಟೆಯಾಗುವುದರ‍‍ಲ್ಲಿ ಯಾವುದೇ ಸಂಶಯವಿಲ್ಲ. ಉದಾಹರ‍‍ಣೆಗೆ ನೀವು ನಿಮ್ಮ ವಸ್ತ್ರ‍‍ಗಳನ್ನು ಇಸ್ತ್ರ‍ಿ ಮಾಡಲು ಕೊಡುತಿದ್ದರ‍ೆ, ಈಗ ಕಶ್ಟ ಅಂತ ಇಸ್ತ್ರ‍ಿಗೆ ಕೊಡುವುದನ್ನು ಬಿಟ್ಟು ಮನೆಯಲ್ಲೇ ಇಸ್ತ್ರ‍ಿ ಮಾಡಲು ಶುರ‍ು ಮಾಡಿದರ‍ೆ ಆ ಲಾಂಡ್ರ‍ಿಯವನ ಗತಿ ಏನಾಗಬೇಡ.

ಹಾಗಾದರ‍ೆ ಇದಕ್ಕೆ ಪರಿಹಾರ‍‍ವಿಲ್ಲವೇ. ಕಂಡಿತ ಇದೆ. ಇದು ಲಾಬ ಮಾಡಿಕೊಳ್ಳುವ ಹೊತ್ತಲ್ಲ. ಪರ‍‍ಸ್ಪರ‍‍ ಸಹಕಾರ‍‍ದಿಂದ ಬದುಕನ್ನು ಮತ್ತೂಮ್ಮೆ ಕಟ್ಟಿಕೊಳ್ಳುವ ಹೊತ್ತು. ದುಂದು ವೆಚ್ಚಕ್ಕೆ ಕಡಿವಾಣ ಬೇಕು. ಹಾಗೇ, ಇತರರನ್ನೂ ಬೆಂಬಲಿಸಬೇಕು. ನಾವು ಏನೆಲ್ಲ ಮಾಡಬಹುದು ಎನ್ನುವುದರ‍‍ ಬಗ್ಗೆ ನನ್ನ ಮನಸಿಗೆ ಅನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅನಗತ್ಯವಾದ ಆಡಂಬರ‍‍ದ ಪ್ರ‍‍ದರ‍‍್ಶನ ಬೇಡ! ಕೆಲವರಿಗೆ ಸಂಬಳ ಈಗಲೂ ಕೂಡ ಸರಿಯಾಗಿ ಬರ‍ುತ್ತಾ ಇರ‍‍ಬಹುದು. ಆದರ‍ೆ ಇನ್ನು ಒಂದು ತಿಂಗಳ ನಂತರದ ಪರಿಸ್ತಿತಿ ಹೀಗೆ ಇರ‍ುತ್ತೆ ಅಂತ ಹೇಳಲು ಬರ‍ುವುದಿಲ್ಲ. ಸಣ್ಣ ಸಣ್ಣ ವಿಚಾರ‍‍ಗಳಿಗೆ ಗಮನಕೊಟ್ಟರ‍ೆ ತುಂಬಾ ದೊಡ್ಡ ಬದಲಾವಣೆಯನ್ನು ನಾವು ಕಾಣಬಹುದು. ಬಂದ ಕಶ್ಟವನ್ನು ಎದುರಿಸಲು ಇದು ಸೂಕ್ತ ಕೂಡ. ಉದಾಹರ‍‍ಣೆಗೆ ಬಟ್ಟೆ. ನಿಮ್ಮ ಬಳಿ ಅನೇಕ ಜೊತೆ ಬಟ್ಟೆಗಳಿರ‍‍ಬಹುದು. ದಿನಕ್ಕೆ ಒಂದರ‍ಂತೆ ಪ್ರ‍‍ತಿಯೊಂದು ದಿನ ಬೇರ‍ೆ ಬೇರ‍ೆ ಬಟ್ಟೆ ಹಾಕಿಕೊಳ್ಳುವ ಅಬ್ಯಾಸ ಇರ‍‍ಬಹುದು. ಇದನ್ನು ಕಡಿಮೆ ಮಾಡಿ. ಎರ‍‍ಡು ಇಲ್ಲವೇ ಮೂರ‍ು ಜೊತೆ ಬಟ್ಟೆಯಲ್ಲಿ ಒಂದು ವಾರ‍‍ ಕಳೆಯಲು ಸಾದ್ಯವಿದೆ. ನೀವು ಮನೆಯಲ್ಲೇ ಬಟ್ಟೆ ಒಗೆದು ಇಸ್ತ್ರ‍ಿ ಮಾಡುತ್ತಿರ‍ುವುದಾದರ‍ೆ ಕಡಿಮೆ ಬಟ್ಟೆ ಉಪಯೋಗಿಸಿದಂತೆ ಸೋಪಿನ ಬಳಕೆ ಕೂಡ ಕಡಿಮೆಯಾಗುತ್ತೆ. ಹಾಗೆ ಕಡಿಮೆ ಬಟ್ಟೆ ಇಸ್ತ್ರ‍ಿಗೆ ಇರ‍ುವುದರಿಂದ ವಿದ್ಯುತ್ ಕೂಡ ಉಳಿತಾಯವಾಗುತ್ತದೆ. ಸರಿ ನೀವು ಬಟ್ಟೆ ಒಗೆಯಲು, ಇಲ್ಲವೇ ಇಸ್ತ್ರ‍ಿ ಮಾಡಲು ಹೊರ‍‍ಗೆ ಕೊಡುತ್ತಿರ‍ಾದರ‍ೆ ಅದನ್ನು ನಿಲ್ಲಿಸಬೇಡಿ. ಆದರ‍ೆ ಮೇಲೆ ಹೇಳಿದಂತೆ ಕಡಿಮೆ ಬಟ್ಟೆ ಉಪಯೋಗಿಸಿ ಹಾಗು ಅದನ್ನು ಹೊರ‍‍ಗೆ ಕೊಡಿ. ನೀವು ದುಡ್ಡನ್ನು ಉಳಿಸುತ್ತೀರಿ ಹಾಗೆಯೇ ಇಸ್ತ್ರ‍ಿಯವರಿಗೆ ಬೆಂಬಲಿಸಿದಂತೆ ಕೂಡ ಆಗುತ್ತದೆ.

ಹಾಗೆಯೇ ತುಂಬಾ ಜಾಸ್ತಿ ಬಟ್ಟೆ ಇದ್ದಾಗ ಹಣಕಾಸಿಗೆ ತುಂಬಾ ಕಶ್ಟದಲ್ಲಿರ‍ುವವರಿಗೆ ಅವರ‍ು ಇಶ್ಟ ಪಡುತ್ತರ‍ಾದರ‍ೆ ಆ ಬಟ್ಟೆ ಅವರಿಗೆ ಕೊಡಿ. ಇನ್ನು ಸಹಾಯ ಮಾಡಲು ದೂರ‍‍ದ ಅನಾತ ಆಶ್ರ‍‍ಮ ಇಲ್ಲವೇ ಯಾವುದೇ ಸಂಗ ಸಂಸ್ತೆಯ ಮೂಲಕ ಬಟ್ಟೆ ಹಂಚಬೇಕೆಂದೇನೂ ಇಲ್ಲ. ಸುತ್ತ ಕಣ್ಣಾಡಿಸಿ. ಕೊರ‍ೊನಾ ಎಲ್ಲರ‍‍ನ್ನು ಆನಾತರ‍‍ನ್ನಾಗಿ ಮಾಡಿಬಿಟ್ಟಿದೆ. ನಿಮ್ಮ ಪರಿಚಯದವರಿಗೆ ಸಹಾಯ ಮಾಡಿ, ಪರ‍‍ವಾಗಿಲ್ಲ. ನಿಮಗೂ ನೆಮ್ಮದಿ ನಿಮ್ಮ ಸಹಾಯ ವ್ಯರ‍್ತವಾಗಲ್ಲ ಅಂತ. ಹಾಗು ಅವರಿಗೂ ಕುಶಿ. ಸಂಗ್ರ‍‍ಹಿಸಿದನ್ನು ಮೊದಲು ಕಾಲಿ ಮಾಡಿ ನಂತರ ಬೇಕಾದುದನ್ನು ಕರೀದಿಸಿ! ದಿನಬಳಕೆಯ ವಸ್ತುಗಳನ್ನು ಮನೆಯಲ್ಲಿ ಸಂಗ್ರ‍‍ಹಿಸಿಟ್ಟುಕೊಂಡಲ್ಲಿ ಅದು ಕಾಲಿಯಾಗುವ ತನಕ ಮತ್ತೆ ಕರೀದಿ ಮಾಡಬೇಡಿ.

ಒಂದು ಸರಿಯಾದ ಸಿದ್ದತೆ ಇದ್ದಲ್ಲಿ ಎಲ್ಲವೂ ಸುಸೂತ್ರ‍‍. ನೀವು ವಾರ‍‍ಕ್ಕೆ ಒಮ್ಮೆ ಸಾಮಾನು ಕರೀದಿ ಮಾಡುತ್ತೀರ‍ಾದರ‍ೆ ಮನದಲ್ಲೇ ಒಂದು ಅಂದಾಜು ಮಾಡಿಬಿಡಬೇಕು. ಈ ವಾರ‍‍ದಲ್ಲಿ ಏನೆಲ್ಲಾ ಅಡುಗೆ ಮಾಡಲಿದ್ದೇನೆ? ಏನೆಲ್ಲಾ ಬೇಕು? ಇದರ‍‍ ಒಂದು ಪಟ್ಟಿ ಮಾಡಬೇಕು. ಪಟ್ಟಿಯಲ್ಲಿಲ್ಲದ ವಸ್ತುಗಳನ್ನು ತಪ್ಪಿ ಕೂಡ ಕರೀದಿ ಮಾಡೋದು ಬೇಡ. ದುಂದು ವೆಚ್ಚಕ್ಕೆ ಸಮಯವಲ್ಲವಿದು. ಹೀಗೆ ಜಾಣ್ಮೆಯಿಂದ ದಿನಬಳಕೆಯ ವಸ್ತುಗಳನ್ನು ಕರೀದಿಸಿದರ‍ೆ ಉಂಟಾಗುವ ಲಾಬದ ಅರಿವು ನಮಗೆ ಒಂದು ತಿಂಗಳಿನಲ್ಲೇ ಗೊತ್ತಾಗಿಬಿಡುತ್ತೆ. ಐಶಾರ‍ಾಮಿ ವಸ್ತುಗಳ ಕರೀದಿ ಸದ್ಯಕ್ಕೆ ಬೇಡ! ಐಶಾರ‍ಾಮಿ ವಸ್ತುಗಳ ಕರೀದಿಗಿದು ಸಮಯವಲ್ಲ. ನಿಮಗೆ ಈಗ ಕೈ ತುಂಬಾ ಸಂಬಳ ಬರ‍ುತ್ತಿರ‍‍ಬಹುದು. ಆದರ‍ೆ ಇನ್ನು ಕೆಲ ತಿಂಗಳ ನಂತರ‍‍ ನಿಮ್ಮ ಸಂಬಳದಲ್ಲಿ ಕಡಿತವಾಗಬಹುದು. ಇಲ್ಲವೇ ಕೆಲಸವೇ ಹೋಗಿ ಬಿಡಬಹುದು. ಏನಾಗುತ್ತೋ ಯಾರಿಗೂ ಗೊತ್ತಿಲ್ಲ. ಹೀಗಿರ‍ುವಾಗ ಸುಮ್ಮನೆ ಅಪಾಯಕ್ಕೆ ಮೈ ಒಡ್ಡಿಕೊಳ್ಳುವುದೇಕೆ. ಸದ್ಯಕ್ಕೆ ಯಾವುದೇ ಐಶಾರ‍ಾಮಿ ವಸ್ತುಗಳು ಬೇಡ. ಮೊದಲು ಕೊರ‍ೊನಾ ಸುಳಿಯಿಂದ ಹೊರ‍‍ಗೆ ಬರ‍ುವ. ಮೈ ಕೈ ಗಟ್ಟಿಯಾಗಿದ್ದರ‍ೆ. ಉತ್ತಮ ಆರ‍ೋಗ್ಯವಿದ್ದರ‍ೆ ಮುಂದೆ ಯಾವಾಗ ಬೇಕಿದ್ದರ‍ೂ ಅವನ್ನು ಕರೀದಿ ಮಾಡಬಹುದು.

ಅನಗತ್ಯವಾದ ಹೊರ‍‍ಗಿನ ಆಹಾರ‍‍ ಬೇಡ. ಆರ‍ೋಗ್ಯವೇ ಬಾಗ್ಯ. ಅನಾರ‍ೋಗ್ಯಕ್ಕೆ ಈಡಾಗಿ ಆಸ್ಪತ್ರ‍ೆಗಳಿಗೆ ಹಣ ಸುರಿಯುವುದರ‍‍ ಬದಲು, ಅದೇ ಹಣವನ್ನು ಮುಂದೆ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಕೆಲವೊಮ್ಮೆ ಸುಮ್ಮ ಸುಮ್ಮನೆ ಹೊರ‍‍ಗೆ ಹೋಗಿ ನಾವು ಜಂಕ್ ಪುಡ್ ತಿನ್ನುತ್ತೇವೆ. ಮಕ್ಕಳಿಗೆ ಕೂಡ ಆ ಕೆಟ್ಟ ಅಬ್ಯಾಸವನ್ನು ಮಾಡಿಸುತ್ತೇವೆ. ಆದರ‍ೆ ಈಗಿನ ಸಂದರ‍್ಬದಲ್ಲಿ, ಆರ‍್ತಿಕವಾಗಿ ಬದುಕು ಕುಸಿಯುತ್ತಿರ‍ುವುದರಿಂದ ಎಶ್ಟು ಎಚ್ಚರ‍‍ ವಹಿಸಿದರ‍ೂ ಸಾಲಲ್ಲ. ಹಾಗಾಗಿ ಮನೆಯಲ್ಲೇ ತಯಾರ‍ು ಮಾಡಿದ ಶುದ್ದವಾದ ಆಹಾರ‍‍ವನ್ನೇ ಸೇವಿಸಿ. ಆರ‍ೋಗ್ಯವು ಉಳಿಯುತ್ತೆ. ದುಡ್ಡು ಉಳಿಯುತ್ತೆ. ಆಸ್ಪತ್ರ‍ೆಗಳ ಮೆಟ್ಟಿಲನ್ನು ಹತ್ತುವುದು ಕೂಡ ತಪ್ಪುತ್ತೆ. ಅನಗತ್ಯ ಸುತ್ತಾಟ / ವಾಹನದ ಬಳಕೆ ಬೇಡ. ಇದು ತುಂಬಾ ಮುಕ್ಯ. ಪ್ರ‍‍ತಿಯೊಂದಕ್ಕೂ ಕಾರ‍ು, ಬೈಕುಗಳ ಮನೆಯಿಂದ ಹೊರ‍‍ಗೆ ತರ‍ುವುದನ್ನು ಕಡಿಮೆ ಮಾಡಬೇಕು. ಹತ್ತಿರ‍‍ದ ಸ್ತಳಗಳಿಗೆ ವಾಹನ ಬೇಡ. ನಟರ‍ಾಜ ಸರ‍್ವಿಸ್ (ನಡಿಗೆ) ಅಶ್ಟೇ ಸಾಕು. ಅನಗತ್ಯ ಕರ‍್ಚು ವೆಚ್ಚ. ಸುಮ್ಮನೆ ಸುತ್ತಾಡಲು, ಸ್ನೇಹಿತರ‍‍ನ್ನು ಕಾಣಲು, ಇಲ್ಲವೇ ಸಿನಿಮಾ ಮಂದಿರ‍‍, ಉಪಹಾರ‍‍ ಮಂದಿರ‍‍ ಎಲ್ಲ ಪ್ರ‍‍ಸ್ತುತ ಸ್ತಿತಿಯಲ್ಲಿ ಕಡಿಮೆ ಮಾಡಿದರ‍ೇನೇ ಒಳಿತು.

ಮನೆಯ ಸುತ್ತ ಮುತ್ತ ಸಲ್ಪ ಹೂ ಗಿಡ ಕಾಯಿ ಪಲ್ಲೆ ತರ‍‍ಕಾರಿಗಳನ್ನು, ಹಣ್ಣು ಹಂಪಲಿನ ಗಿಡ ಬೆಳಿಸಿ. ಹಣ ಉಳಿತಾಯ ಜೊತೆಗೆ ಮನಸಿಗೂ, ದೇಹಕ್ಕೂ ಉಲ್ಲಾಸ. ಬಂಡವಾಳ. ಉಳಿತಾಯವನ್ನು ಸರಿಯಾದ ಯೋಜನೆಯೊಂದಿಗೆ ವಿನಿಯೋಗಿಸಿ. ಬಂಡವಾಳ ಹೂಡುವಾಗ ಸಾದಕ ಬಾದಕಗಳ ಪರಿಶೀಲನೆ ನಡೆಸಿ ಹೂಡಿಕೆ ಮಾಡಿ. ಒಂದು ಪುಟ್ಟ ಉದಾಹರ‍‍ಣೆ ಕೊಡೋದಾದ್ರ‍ೆ ಈಗಿನ ಸಂಬಳದಲ್ಲಿ ಪ್ರ‍‍ತಿತಿಂಗಳು ಉಳಿತಾಯ ಮಾಡಲು ಸಾದ್ಯವಿಲ್ಲ, ಆದರ‍ೆ ಕುಟುಂಬದ ಬವಿಶ್ಯದ ಬಗ್ಗೆ ಚಿಂತೆಯೇ? ಉತ್ತಮ ವಿಮ ಕಂಪೆನಿಯಲ್ಲಿ ಹೂಡಿಕೆ ಮಾಡಿ. ವರ‍್ಶದಲ್ಲಿ ಸಲ್ಪ ದುಡ್ಡು ಕಟ್ಟುವುದಾದರ‍ೂ, ಏನಾದ್ರ‍ು ಹೆಚ್ಚು ಕಮ್ಮಿಯಾದಲ್ಲಿ (ದೇವರ‍‍ ದಯೆಯಿಂದ ಯಾರಿಗೂ ಏನು ಆಗುವುದು ಬೇಡ) ಮನೆಯವರ‍‍ನ್ನು ಬೀದಿಗೆ ಹಾಕಲಿಲ್ಲ ಎನ್ನುವ ನೆಮ್ಮದಿ. ಸಣ್ಣ ಉಳಿತಾಯ ಮಾಡುವವರಿಗೆ ವಿಮೆಗಳು ಒಂದು ಉತ್ತಮ ಹೂಡಿಕೆಯ ಅವಕಾಶ ಎನ್ನುವುದು ನನ್ನ ಬಾವನೆ. ಹಾಗೆ ಆರ‍ೋಗ್ಯ ವಿಮೆಗಳು. ಮುಂದೆ ಎಂದಾದರ‍ೂ ಕಾಯಿಲೆ ಕಸಾಲೆ ಬಂದರ‍ೂ ಆಸ್ಪತ್ರ‍ೆಗಳ ವೆಚ್ಚವನ್ನು ಸರಿದೂಗಿಸಲು ಬರ‍ುತ್ತದೆ.

ಮೊದಲೆಲ್ಲ ಸುನಾಮಿ. ಮಳೆ ಎಲ್ಲವೂ ಬಂದು ಹಲವರ‍‍ ಪ್ರ‍ಾಣವನ್ನು ಕಸಿದುಕೊಂಡವು. ಬದುಕುಳಿದವರ‍‍ ಬದುಕನ್ನು ಎಲ್ಲರ‍ೂ ಸೇರಿ ಕಟ್ಟಿ ಕೊಟ್ಟರ‍ು. ಆದರ‍ೆ ಕೊರ‍ೊನಾ ಹಾಗಲ್ಲ. ಅದು ಕೆಲವೇ ಕೆಲವು ಜನರ‍‍ ಜೀವನದೊಂದಿಗೆ ಆಟವಾಡುತಿಲ್ಲ. ಇಡೀ ಪ್ರ‍‍ಪಂಚದ ಅರ‍್ತವ್ಯವಸ್ತೆಯನ್ನೇ ಅದು ಬುಡಮೇಲು ಮಾಡಿಬಿಟ್ಟಿದೆ. ಕಡೆಯದಾಗಿ ಹೇಳೋದಾದರ‍ೆ ಕೊರ‍ೋನಾ ಹೇಗೆಲ್ಲ ನಮ್ಮ ಜೀವನವನ್ನು ಬದಲಾಯಿಸಬಹುದು ಎನ್ನುವುದನ್ನು ಊಹಿಸಲು ಕೂಡ ಸಾದ್ಯವಿಲ್ಲ. ಬನ್ನಿ ಎಲ್ಲ ಕೈ ಜೋಡಿಸಿ ಕೊರ‍ೊನಾ ವಿರ‍ುದ್ದ ಹೋರ‍ಾ‍ಡುವ. ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಿಕೊಳ್ಳುವ. ನಮ್ಮ ಜಾಗರ‍ೂಕತೆಯೇ ನಮ್ಮನ್ನು ಉಳಿಸಬಲ್ಲದು.

(ಚಿತ್ರ ಸೆಲೆ: pixabay.com

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Sanjeev Hs says:

    ಉತ್ತಮ ಬರಹ.. ಮುಂದಿನ ನಡೆ ಹೇಗಿರಬೇಕೆಂದು ಸೊಗಸಾಗಿ ವಿವರಿಸಿದ್ದಿರಿ..

  2. vani raj says:

    ನಿಜವಾದ ಮಾತು

ಅನಿಸಿಕೆ ಬರೆಯಿರಿ: