ಹಾಲಿನ ಕೇಕ್
– ಸವಿತಾ.
ಬೇಕಾಗುವ ಸಾಮಾನುಗಳು
ಹಾಲು – 1 ಲೀಟರ್
ತುಪ್ಪ – 1 ಚಮಚ
ಸಕ್ಕರೆ – 3 ಚಮಚ
ನಿಂಬೆ ಹಣ್ಣು – 1/2 ಹೋಳು
ಏಲಕ್ಕಿ – 2
ಮಾಡುವ ವಿದಾನ
ಹಾಲು ಕಾಯಿಸಿ ನಿಂಬೆ ರಸ ಸೇರಿಸಿ ಕೈಯಾಡಿಸಿ. ಹಾಲು ಒಡೆದು ನೀರು-ಪನ್ನೀರು ಬೇರೆ ಬೇರೆ ಆಗುತ್ತದೆ . ಸ್ವಲ್ಪ ಹೊತ್ತು ಆರಲು ಬಿಡಿ.
ಎರಡು ಲೋಟ ತಣ್ಣೀರು ಹಾಕಿ, ನೀರು ಬಸಿದು, ಕಾಲು ಲೋಟ ನೀರು ಉಳಿಸಿ ಹಾಗೇ ಕಾಯಲು ಇಡಿ. ಸಕ್ಕರೆ ಸೇರಿಸಿ 15 ನಿಮಿಶ ಚೆನ್ನಾಗಿ ಕುದಿಸಿ. ತುಪ್ಪ ಸೇರಿಸಿ ಮತ್ತೆ 5 ನಿಮಿಶ ಕುದಿಸಿ. ಮದ್ಯಮ ಉರಿ ಇಟ್ಟು ಕುದಿಸಿ ಇಳಿಸಿ. ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ. ಒಂದು ಚೌಕ ಡಬ್ಬಕ್ಕೆ ತುಪ್ಪ ಸವರಿ ಕುದಿಸಿದ ಮಿಶ್ರಣ ಹಾಕಿ ಸ್ವಲ್ಪ ಹೊತ್ತು ಆರಲು ಬಿಡಿ. ಆಮೇಲೆ ಕತ್ತರಿಸಿ ಇಟ್ಟುಕೊಳ್ಳಿ. ಈಗ ಹಾಲಿನ ಕೇಕ್ ಸವಿಯಲು ತಯಾರು.
ಇತ್ತೀಚಿನ ಅನಿಸಿಕೆಗಳು