ಕವಿತೆ : ಮಮತೆಯ ಕರುಣಾಮಯಿ

ಶ್ಯಾಮಲಶ್ರೀ.ಕೆ.ಎಸ್.

ಅಮ್ಮ, Mother

ಅಳುವಾಗ ಆಲಂಗಿಸಿ
ಹಸಿದಾಗ ಉಣಬಡಿಸಿ
ಮುನಿದಾಗ ಸಂತೈಸಿ
ಕಂದಮ್ಮನ ಹರಸುವಳು ತಾಯೆಂಬ ಅರಸಿ

ಸನ್ಮಾರ‍್ಗವನ್ನು ತೋರಿಸುತ್ತಾ
ಸದ್ಬುದ್ದಿಯನ್ನು ಕಲಿಸುತ್ತಾ
ನೋವನ್ನು ಮರೆಸುತ್ತಾ
ರಕ್ಶೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ

ಮಮತೆಯ ಕರುಣಾಮಯಿ
ಪ್ರೀತಿಯ ಸಹ್ರುದಯಿ
ಆನಂದದ ಚಿನ್ಮಯಿ
ಸದಾ ಮಿಡಿಯುವ ದೈವವೇ ತಾಯಿ

ತೊದಲು ನುಡಿಯ ಅರಿತಿಹಳು
ಪ್ರತಮ ಗುರು ಆಗಿಹಳು
ಬದುಕೆಂಬ ವಿದ್ಯೆಯ ಕಲಿಸಿಹಳು
ಸ್ಪೂರ‍್ತಿಯ ಸೆಲೆಯಾಗಿಹ ಮಾತ್ರುವಿಗೆ ನಮನಗಳು

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V Shashidhara says:

    ಚಂದದ ಕವನ. ತಾಯಿಗೆ ಪರ್ಯಾಯ ಇಲ್ಲ.

  2. Kiran G says:

    ಅದ್ಭುತವಾದ ಕವನ…. ಅಮ್ಮನಿಗೆ ಅಮ್ಮನೆ ಸಾಟಿ

ಅನಿಸಿಕೆ ಬರೆಯಿರಿ:

%d bloggers like this: