ಕವಿತೆ: ಅಂದು-ಇಂದು

– ಶ್ಯಾಮಲಶ್ರೀ.ಕೆ.ಎಸ್.

ಕಿಲ ಕಿಲ ನಗುವ
ಚಿಣ್ಣರು ಅಂದು
ಹಗೆ ಬಗೆ ತೋರುವ
ದುರುಳರು ಇಂದು

ಪಳ ಪಳ ಹೊಳೆಯುವ
ಮೊಗಗಳು ಅಂದು
ಹಸಿ ಹುಸಿ ಮನಸಿನ
ಮನಗಳು ಇಂದು

ಬಣ್ಣ ಬಣ್ಣದ ಸ್ವಪ್ನಗಳ
ಆಗರ ಅಂದು
ದುಕ್ಕ ದುಮ್ಮಾನ ಬವಣೆಗಳ
ಹಂದರ ಇಂದು

ಹಾಸ್ಯ ಲಾಸ್ಯಗಳ
ಪಂಡಿತರು ಅಂದು
ಹಮ್ಮು ಬಿಮ್ಮುಗಳ
ಪಾಮರರು ಇಂದು

(ಚಿತ್ರ ಸೆಲೆ: trendsandlife.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: