ಕವಿತೆ : ನಮ್ಮ ಯೋದರು

ವೆಂಕಟೇಶ ಚಾಗಿ.

ಸೈನಿಕ, soldier

ವೀರರಿವರು ಯೋದರು
ಬರತಮಾತೆ ಪುತ್ರರು
ದೇಶಕ್ಕಾಗಿ ದುಡಿವರಿವರು
ಜಗವು ಕಂಡ ದೀರರು

ಹಿಮಾಲಯದ ಬೆಟ್ಟಗಳಿರಲಿ
ಪರ‍್ವತವಿರಲಿ ಶಿಕರಗಳಿರಲಿ
ಕಲ್ಲುಮುಳ್ಳು ಹಾದಿಯಿರಲಿ
ನುಗ್ಗಿ ಮುಂದೆ ನಡೆವರು

ಮರಳುಗಾಡ ಬಿಸಿಲಿನಲ್ಲಿ
ಹಿಮಾಲಯದ ಚಳಿಯಲ್ಲಿ
ಸಮುದ್ರಗಳ ನೀರಿನಲ್ಲಿ
ಕರ‍್ತವ್ಯದಲ್ಲಿ ನಿರತರಿವರು

ಬಂದೂಕಿಗೆ ಎದೆಯೊಡ್ಡಿ
ಶತ್ರುಗಳ ಎದೆಯ ಸೀಳಿ
ವೈರಿ ನೆಲದಿ ನುಗ್ಗಿ ನಡೆದು
ವಿಜಯಗೀತೆ ಹಾಡುವರು

ದೇಶಬಕ್ತಿ ಮನದಲ್ಲಿ
ಶಾಂತಿಗಾಗಿ ನೆಲದಲ್ಲಿ
ತಾಯಿ ನೆಲವ ರಕ್ಶಿಸಲು
ಪ್ರಾಣವನ್ನೇ ನೀಡುವರು

ಇವರೇ ನಮ್ಮ ಯೋದರು
ಬರತ ಜನರ ರಕ್ಶಕರು
ಇಂತ ಸೈನ್ಯ ಪಡೆದ ನಾವು
ಲೋಕದಲ್ಲೇ ದನ್ಯರು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks