ಕವಿತೆ : ಆಶಾಡದಲ್ಲೊಂದು ದಿನ
ಆಶಾಡದಲ್ಲೊಂದು ದಿನ
ಇದ್ದಕ್ಕಿದ್ದಂತೆ ನೀನು ಬಂದೆ
ಇಳಿ ಸಂಜೆ ಮಳೆಯಂತೆ
ತುಂಬಿ ಹರಿವ ಹೊಳೆ
ಬಳಿ ಸಾರಿ ಬಂದಂತೆ
ತೆವಳುತ್ತಾ ತೆವಳುತ್ತಾ
ಬೇರು ,ಜೀವ ಜಲ ಹುಡುಕುತ್ತಾ…
ತೊರೆ ದೂರವಿದ್ದರೂ
ತಂಪು ಹೊತ್ತು
ಬರುವ ತಂಗಾಳಿಯಂತೆ….
ಮುಂಜಾನೆಯ ಎಳೆ ಬಿಸಿಲಿಗೆ
ಮೊಗ್ಗರಳಿ ಲಾಸ್ಯದಲ್ಲಿ ಅರಳಿದ
ಹೂಗಳ ಪರಿಮಳದ ಬಾರಕ್ಕೆ
ಬೀಸುವ ಗಾಳಿಯಲ್ಲಿ
ಸುಗಂದ ಪಲ್ಲವಿಸಿದಂತೆ
ಹಾಗೇ ತೆರೆದಿಟ್ಟ
ಕಿಟಿಕಿ, ಬಾಗಿಲು
ಹೇಳಲಿಲ್ಲ, ಕೇಳಲಿಲ್ಲ
ಒಳಗೆ ಇಟ್ಟಾಗಿದೆ ಹೆಜ್ಜೆ
ಇನ್ನೂ ಸ್ವಲ್ಪ ಹೊತ್ತು
ಇರಬಾರದೇ ಹೀಗೆ….?!
(ಚಿತ್ರ ಸೆಲೆ: healingwithdrcraig.com )
ಇತ್ತೀಚಿನ ಅನಿಸಿಕೆಗಳು