ಕವಿತೆ: ಹಡೆದವ್ವ

– ನೌಶಾದ್ ಅಲಿ ಎ. ಎಸ್.

ತಾಯಿ ಮತ್ತು ಮಗು

ಅವ್ವ ಪದವೇ ಪ್ರೇಮ ಸ್ವರವು
ಹ್ರಸ್ವ ದೀರ‍್ಗ ಎಲ್ಲವೂ
ಉಸಿರತನಕ ಉಸಿರೇ ನಾವು
ಹಡೆದವ್ವ ಜೀವ ದೈವ ಅವಳು

ಆಸೆ ಕನಸು ಹಸಿವು
ಎಲ್ಲವೂ ಮರೆತು
ಜೀವ ನಮಗೆ ಮೀಸಲು
ತ್ಯಾಗವು ಹಡೆದವ್ವಳ ಪೇಟೆಂಟು

ದರೆಯು ಬಾರಕೆ ಕುಸಿಯುವುದು
ಅವ್ವ ದರೆಗೂ ಮಿಗಿಲು
ಅವಳ ಸಹನೆಗೆ ಮಿತಿಯಿಲ್ಲ
ಸಹನೆಯ ಸ್ವತ್ತು ಅವಳದು

ಅವ್ವ ಅದಾವ ಶಾಲೆ
ಕಲಿತಳೋ ಇಲ್ಲವೋ
ಬದುಕಿಡೀ ಮಕ್ಕಳ
ಪಾಲಿಗವಳು ಮಹಾಗುರುವು

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks