
ಕವಿತೆ: ಈರ‍್ಶ್ಯೆಯು ಹೊಕ್ಕಿರಲು
ಈರ‍್ಶ್ಯೆಯು ಹೊಕ್ಕಿರಲು
ಪುಟಿಯುವುದು ಬೇಗುದಿ
ಮನವು ಸೆರೆಸಿಕ್ಕಿರಲು
ಮತ್ಸರದ ಬಾವದಿ
ಮೋರೆಯದು ಬೀರುವುದು
ಕ್ರುತಕ ಮಂದಹಾಸ
ಮನಸಲ್ಲಿ ಮೆರೆದಿಹುದು
ಅಸೂಯೆಯ ಅಟ್ಟಹಾಸ
ಕಡುನುಡಿಯು ಹೊರಬೀಳುವುದು
ಕರುಬುತ್ತಾ ಅವಸರದಿ
ಕಿಚ್ಚು ಹತ್ತಿಹುದು
ಸಹಿಸಲಾರದೆ ರಬಸದಿ
ಇದಿರ ಅಸಹಿಸಿದೊಡೆ
ದೊರಕಿದ ಪಲವೇನು?
ವೈಶಾಲ್ಯತೆಯು ಮೂಡಿದೆಡೆ
ಬಾಳ್ಮೆಯದು ಹಸನು
( ಚಿತ್ರ ಸೆಲೆ : irishtimes.com )