ಆಗಸ್ಟ್ 11, 2020

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ ಎಡರಿಂಗೆ ಕಡೆಯುಂಟೆ ಅವ್ವಾ. (148-801) ಕಲ್ಲ್+ಅ; ಕಲ್ಲು=ಶಿಲೆ/ಅರೆ/ಬಂಡೆ; ಹೊರು=ತೂಕವಾಗಿರುವ ವಸ್ತುವನ್ನು ತಲೆಯ ಮೇಲೆ ಇಲ್ಲವೇ ಹೆಗಲ ಮೇಲೆ ಇಟ್ಟುಕೊಳ್ಳುವುದು; ಹೊತ್ತು=ಹೊತ್ತುಕೊಂಡು; ಕಡಲ್+ಒಳಗೆ; ಕಡಲು=ಸಮುದ್ರ/ಸಾಗರ; ಕಡಲೊಳಗೆ=ಕಡಲಿನಲ್ಲಿ;...