ಕವಿತೆ : ಮೌನದ ಹಾರೈಕೆ

–  .

teacher ಗುರುಗಳು

ಅಕ್ಶರಕ್ಶರಗಳ ಕಲಿಕೆ
ಸಾಕ್ಶರರ ಹೆಚ್ಚಳಿಕೆ
ವಿವೇಚನೆಯ ಹೆಗ್ಗಳಿಕೆ
ಹಿರಿದಾಯ್ತು ಗ್ನಾನದ ಆಳ್ವಿಕೆ
ಹಸನಾಯ್ತು ಬಾಳ ಬಂದಳಿಕೆ

ಪೋರನ ಕಿರಿ ಕಿರಿ ಉಬ್ಬಳಿಕೆ
ಮಾಸ್ತರರ ಶಿಸ್ತಿನ ನಡವಳಿಕೆ
ಬೆದರಿಸಿ ಬಂದಿಸಿತು ಉಡಾಳಿಕೆ
ಸಾಕ್ಶರ ಕುವರನಾದ ದೇಶಕ್ಕೆ ಹೆಗ್ಗಳಿಕೆ

ತಿದ್ದುವ ಶಿಕ್ಶಕನ ಸಮರ‍್ಪಣ ಬಾವಕೆ
ವ್ಯಕ್ತಿತ್ವವರಳಿತು ದೇಶದ ಬಂಡಾರಕೆ
ಆಸ್ತಿಯಾಗಿ ನಿಂತಿತು ದೇಶೋದ್ದಾರಕೆ
ಮಕ್ಕಳ ಏಳಿಗೆಯ ಕಂಡು ಹಿಗ್ಗುವಳಾಕೆ
ಗುರುಗಳ ಬಳುವಳಿಗೆ ಸಾಕ್ಶಿಯಾಕೆ

ದೇಶ ಕಟ್ಟುವ ಶಿಕ್ಶಕರಿಗೆ ನಮಿಕೆ
ಕೈಂಕರ‍್ಯ ಸಾಗಲಿ ಇರದೆ ಅಹಮಿಕೆ
ನಮ್ಮ ಬೆಳೆಸಿ, ನಾಡ ಕಟ್ಟುವ ಕಲಿಸುವಿಕೆ
ಪಟ್ಟು ಹಿಡಿದು ಗಟ್ಟಿಗೊಳಿಸುವಿಕೆ
ಶಿಕ್ಶಕರಿಗೆ ಮನದುಂಬಿ ಮೌನದ ಹಾರೈಕೆ

(ಚಿತ್ರ ಸೆಲೆ: publicdomainvectors.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.