ಸೆಪ್ಟಂಬರ್ 1, 2020

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಹಾಡಿದಡೇನು ಕೇಳಿದಡೇನು ತನ್ನಲುಳ್ಳ ಅವಗುಣ ಬಿಡದನ್ನಕ್ಕ. (180/804) ಹಾಡಿದಡೆ+ಏನು; ಹಾಡು=ಕೊರಳಿನಿಂದ ಇಂಪಾದ ದನಿಯಲ್ಲಿ ರಾಗಮಯವಾಗಿ ಕಾವ್ಯವನ್ನು/ವಚನವನ್ನು/ಸಾಹಿತ್ಯದ ಸಾಲುಗಳನ್ನು ಉಚ್ಚರಿಸುವುದು; ಹಾಡಿದಡೆ=ಹಾಡಿದರೆ; ಏನು=ಯಾವುದು; ಕೇಳಿದಡೆ+ಏನು; ಕೇಳು=ಆಲಿಸು; ಕೇಳಿದಡೆ=ಕೇಳಿದರೆ ; ತನ್ನ+ಅಲ್+ಉಳ್ಳ; ತನ್ನಲ್=ತನ್ನಲ್ಲಿ;...