ಸೆಪ್ಟಂಬರ್ 15, 2020

ವಚನಗಳು, Vachanas

ಅಕ್ಕಮ್ಮನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಅಂಗಕ್ಕೆ ಆಚಾರ ಮನಕ್ಕೆ ಅರಿವು ಅರಿವಿಂಗೆ ಜ್ಞಾನ ನಿರ್ಧಾರವಾಗಿ ಕರಿಗೊಂಡುದೆ ವ್ರತ. (481/838) ಅಂಗ=ಮಯ್/ದೇಹ/ಶರೀರ; ಆಚಾರ=ಒಳ್ಳೆಯ ವರ‍್ತನೆ ; ಮನ=ಮನಸ್ಸು/ಚಿತ್ತ; ಅರಿವು=ತಿಳುವಳಿಕೆ; ಅರಿವಿಂಗೆ=ಅರಿವಿಗೆ; ಜ್ಞಾನ=ಅರಿವು/ತಿಳುವಳಿಕೆ ; ನಿರ್ಧಾರ+ಆಗಿ; ನಿರ್ಧಾರ=ನಿಶ್ಚಯ; ಕರಿಗೊಳ್ಳು=ಗಟ್ಟಿಗೊಳ್ಳು;...