ಕವಿತೆ : ಕಳಚಿದ ಆ ಕರಾಳ ದಿನಗಳು

ಶ್ಯಾಮಲಶ್ರೀ.ಕೆ.ಎಸ್.

ಬಾರತದ ಬಾವುಟ, Indian Flag

ಉರುಳಿದವು ದಿನಗಳು
ಕಳೆದವು ವರುಶಗಳು
ಅಬ್ಬರಿಸಿದರು ವೈರಿಗಳು
ತಾಯಿ ಬಾರತಾಂಬೆಯ ಮಡಿಲೊಳು

ಬದುಕಬೇಕಾಯಿತು ಪರರ ಹಂಗಿನಲ್ಲಿ
ಆಂಗ್ಲರ ಕಪಿಮುಶ್ಟಿಯಲ್ಲಿ
ಸೆಣೆಸಬೇಕಾಯಿತು ಜೀವನ್ಮರಣ ಹೋರಾಟದಲ್ಲಿ
ಪರಕೀಯರ ಕುತಂತ್ರದಲ್ಲಿ

ಹೋರಾಡಿದರು ಮಹನೀಯರು
ಕಾಳಗವ ಮಾಡಿದರು
ಹರಿಸಿದರು ನೆತ್ತರು
ಮುಡುಪಾಗಿಟ್ಟರು ತಮ್ಮ ಉಸಿರು

ಸಹಿಸಲಾಗದ ನೋವು
ಲೆಕ್ಕವಿಲ್ಲದ ಸಾವು
ನಿಲ್ಲದ ಬ್ರಿಟೀಶರ ದರ‍್ಪವು
ಹೆಚ್ಚಿತು ಸ್ವಾಬಿಮಾನದ ಕಾವು

ಉಪವಾಸವ ಮಾಡಿದರು
ಶಾಂತಿಯಿಂದ ಪ್ರತಿಬಟಿಸಿದರು
ಕಾರಾಗ್ರುಹವ ಸೇರಿದರು
ಮರಳಿ ಯತ್ನವ ಮಾಡಿದರು

ಕಳಚಿದವು ಕರಾಳ ದಿನಗಳು
ಮರೆಯಲಾಗದು ಬಿಡುಗಡೆ ಸಿಕ್ಕ ದಿನ
ಸ್ವಾತಂತ್ರ‍್ಯ ದೊರೆತ ಆ ಸುದಿನ
ಆಗಸ್ಟ 15ರ ಶುಬದಿನ

( ಚಿತ್ರಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *