ಮಕ್ಕಳ ಕವಿತೆ: ಹಕ್ಕಿಯ ಅಳಲು
ಹಕ್ಕಿಯೊಂದು ರೆಕ್ಕೆ ಬಡಿದು ಹಾರಿ ಹೋಯಿತು
ಹುಲ್ಲು ಕಡ್ಡಿ ಹೆಕ್ಕಿ ತಂದು ಗೂಡು ಕಟ್ಟಿತು
ನೋವನುಂಡು ಮೊಟ್ಟೆ ಇಟ್ಟು ಮರಿಯ ಮಾಡಿತು
ಚಿಂವ್-ಚಿಂವ್ ಎಂಬ ಮಕ್ಕಳ ಗಾನದಿ ತನ್ನ ಮರೆಯಿತು
ಕಾಳು-ಕಡಿಯ ತಂದು ಕಂದಮ್ಮಗಳ ಹಸಿವ ನೀಗಿಸುತಲಿತ್ತು
ಆನಂದದಿ ಮರಿಗಳ ಜೊತೆ ಆಟವಾಡುತಲಿತ್ತು
ಒಮ್ಮೆಏಕೋ ಗೂಡ ನೋಡಿ-ನೋಡಿ ರೋದಿಸುತ್ತಿತ್ತು
ಗೆಳೆಯರನ್ನೆಲ್ಲಾ ಕರೆದು ಕರೆದು ದುಕ್ಕವ ತೋಡುತಲಿತ್ತು
ತನ್ನೊಡಲ ಕೂಸುಗಳು ಕಾಣೆಯಾಗಿ ಗೂಡು ಬರಿದಾಗಿತ್ತು
ವಿಶದ ಜಂತುವೊಂದು ಬಂದು ಮರಿಗಳ ಬಕ್ಶಿಸಿತ್ತು
ವಿಶಯ ತಿಳಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು
ದುಕ್ಕ ನುಂಗಲಾಗದೆ ತನ್ನ ಪ್ರಾಣವ ಬಿಟ್ಟಿತ್ತು
ಮಿತ್ರರೆಲ್ಲಾ ಹಕ್ಕಿಯ ಆತ್ಮಕ್ಕೆ ಶಾಂತಿ ಕೋರಿದವು
ದುಕ್ಕದಿ ಎಲ್ಲವೂ ಗೂಡು ಸೇರಿದವು
ಮರು ದಿನವೇ ಹಕ್ಕಿಗಳೆಲ್ಲಾ ಚರ‍್ಚೆ ಮಾಡಿದವು
ವಿಶದ ಜಂತುವಿಗೆ ಪಾಟ ಕಲಿಸಲು ನಿರ‍್ದರಿಸಿದವು
ಕ್ರೋದದಿ ಕ್ರೂರ ಜಂತುವ ಕುಕ್ಕಿ ಕೊಂದವು
ಸಂತಸದಿ ನಲಿ ನಲಿದು ಸ್ನೇಹಪರತೆಯ ಸಾರಿದವು
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು