ತಿಂಗಳ ಬರಹಗಳು: ಡಿಸೆಂಬರ್ 2020

ವಚನಗಳು, Vachanas

ನಗೆಯ ಮಾರಿತಂದೆಯ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ನಡೆ ನುಡಿ ಶುದ್ಧವಿಲ್ಲದೆ ಮಾತಿನ ಬಣಬೆಯ ನೀತಿಯೇಕೊ. (1205/1325) ನಡೆ=ಮಾಡುವ ಕೆಲಸ/ಕಸುಬು; ನುಡಿ=ಆಡುವ ಮಾತು/ಸೊಲ್ಲು; ಶುದ್ಧ+ಇಲ್ಲದೆ; ಶುದ್ಧ=ಒಳ್ಳೆಯದು/ಸರಿಯಾದುದು; ಬಣಬೆ=ಹುಲ್ಲಿನ ರಾಶಿ/ಒಟ್ಟಲು/ಮೆದೆ; ಮಾತಿನ ಬಣಬೆ=ಇದೊಂದು ನುಡಿಗಟ್ಟು. ವ್ಯಕ್ತಿಯು ಕೆಲಸಕ್ಕೆ ಬಾರದ ಪೊಳ್ಳು...