ಮೂಲಂಗಿ ಸೊಪ್ಪಿನ ವಡೆ

– ಸವಿತಾ.

ಮೂಲಂಗಿ ಸೊಪ್ಪಿನ ವಡೆ

 ಬೇಕಾಗುವ ಸಾಮಾನುಗಳು

 • ಉದ್ದಿನ ಬೇಳೆ – 1/2 ಬಟ್ಟಲು
 • ಹೆಸರು ಬೇಳೆ  – 1/2 ಬಟ್ಟಲು
 • ಕಡಲೇ ಕಾಳು – 1/2 ಬಟ್ಟಲು
 • ಕಡಲೇ ಹಿಟ್ಟು – 2 ಚಮಚ
 • ಹಸಿ ಮೆಣಸಿನಕಾಯಿ – 4
 • ಹಸಿ ಶುಂಟಿ – 1/4 ಇಂಚು
 • ಜೀರಿಗೆ – 1/4 ಚಮಚ
 • ಅಜೀವಾಯಿನ್ (ಓಂ ಕಾಳು)  – 1/4 ಚಮಚ
 • ಮೂಲಂಗಿ ಎಲೆ –  6-8
 • ಅರಿಶಿಣ ಪುಡಿ  – 1/4 ಚಮಚ
 • ಗರಮ್ ಮಸಾಲೆ ಪುಡಿ  –  1/2 ಚಮಚ
 • ಈರುಳ್ಳಿ  – 1
 • ಕರಿಯಲು ಎಣ್ಣೆ
 • ಕೊತ್ತಂಬರಿ ಸೊಪ್ಪು ಸ್ವಲ್ಪ
 • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಕಡಲೇ ಕಾಳು, ಉದ್ದಿನ ಬೇಳೆ ಮತ್ತು ಹೆಸರು ಬೇಳೆ ಎಲ್ಲವನ್ನು ತೊಳೆದು ನಾಲ್ಕು ತಾಸು ನೀರಿನಲ್ಲಿ ನೆನೆ ಹಾಕಿ. ನಂತರ ಹಸಿ ಮೂಲಂಗಿ ಸೊಪ್ಪು ( ಎಲೆ), ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ,  ಜೀರಿಗೆ, ಉಪ್ಪು ಮತ್ತು  ಅಜೀವಾಯಿನ್ ಹಾಕಿ ಒಂದು ಸುತ್ತು ತಿರುಗಿಸಿ ಇಟ್ಟುಕೊಳ್ಳಬೇಕು. ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಸೇರಿಸಬೇಕು. ಗರಮ್ ಮಸಾಲೆ ಪುಡಿ ಸೇರಿಸಬೇಕು. ಅರಿಶಿಣ ಪುಡಿ  ಮತ್ತು ಕಡಲೇ ಹಿಟ್ಟು ಸೇರಿಸಿ ಮಿಕ್ಸರ‍್ನಲ್ಲಿ ಸ್ವಲ್ಪ ನೀರು ಹಾಕಿ, ಚೆನ್ನಾಗಿ ಕಲಸಿ ಹಿಟ್ಟು ತಯಾರಿಸಿ ಇಟ್ಟುಕೊಳ್ಳಬೇಕು. ಕಾದ ಎಣ್ಣೆಯಲ್ಲಿ ಹಿಟ್ಟು ಬಿಟ್ಟು ಕರಿದು ತೆಗೆಯಬೇಕು. ಈಗ ಮೂಲಂಗಿ ಸೊಪ್ಪಿನ ವಡೆ ಸವಿಯಲು ಸಿದ್ದ . ಇದನ್ನು ಅನ್ನದ ಜೊತೆ ಅತವಾ ಸಂಜೆ ಟೀ ಜೊತೆ ಸವಿಯಬಹುದು .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: