ಕವಿತೆ: ಮುನ್ನ

– .

ಮುನ್ನ

ನೇಸರ ಮೂಡುವ ಮುನ್ನ
ಹಾಸಿಗೆ ಬಿಟ್ಟು ಏಳಬೇಕು
ಹೊಸಿಲು ದಾಟುವ ಮುನ್ನ
ಪಶುಪತಿಯ ನೆನೆಯಬೇಕು

ತಾಸು ಕಳೆಯುವ ಮುನ್ನ
ಕಾಸು ದುಡಿಯಬೇಕು
ಉಸಿರು ನಿಂತು ಹೋಗುವ ಮುನ್ನ
ಹಸುವಿನ ಹಾಗೆ ಬಾಳಬೇಕು

ಐಸಿರಿ ಬರಿದಾಗುವ ಮುನ್ನ
ತುಸು ದಾನದರ‍್ಮ ಮಾಡಬೇಕು
ನಸೀಬು ಕೈಕೊಡುವ ಮುನ್ನ
ರುಶಿಯಂತೆ ನಾವಾಗಬೇಕು

ಹುಸಿ ನುಡಿಯಾಡುವ ಮುನ್ನ
ವಸಿ ಯೋಚಿಸಿ ಆಡಬೇಕು
ಕೆಸರು ಎರಚುವ ಮುನ್ನ
ಕಸಿವಿಸಿಯಾಗುವುದ ತಿಳಿಯಬೇಕು

ಮೊಸರು ಮಜ್ಜಿಗೆ ಮಾಡುವ ಮುನ್ನ
ಕಡೆದು ಬೆಣ್ಣೆಯ ತೆಗೆಯಬೇಕು
ಸಸಿಯ ಬೀಜ ಬಿತ್ತುವ ಮುನ್ನ
ಕ್ರುಶಿ ಬೂಮಿಯ ಸತ್ವ ಅರಿಯಬೇಕು

ಬಾಳಿನ ಗುರಿಯ ಶಿಕರವೇರುವ ಮುನ್ನ
ಕಲ್ಲು ಮುಳ್ಳಿನ ದಾರಿಯ ತುಳಿಯಬೇಕು
ಶಿವನ ಮಾತಿಗೆ ಹೌದೆನ್ನುವ ಮುನ್ನ
ಜೀವನದ ತತ್ವ ಪಾಲಿಸಬೇಕು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: