ಅವಲಕ್ಕಿ ಹಲ್ವಾ
– ಸವಿತಾ.
ಬೇಕಾಗುವ ಸಾಮಾನುಗಳು
- ಅವಲಕ್ಕಿ – 2 ಬಟ್ಟಲು
- ಬೆಲ್ಲ – 1 ಬಟ್ಟಲು
- ತುಪ್ಪ – 1/2 ಬಟ್ಟಲು
- ಗಸಗಸೆ – 2 ಚಮಚ
- ತೆಂಗಿನಕಾಯಿ – 1
- ಏಲಕ್ಕಿ – 2
- ಲವಂಗ – 2
- ಬಾದಾಮಿ – 2
- ಗೋಡಂಬಿ – 2
ಮಾಡುವ ಬಗೆ
ಅವಲಕ್ಕಿ ಹುರಿದು ಆರಿದ ನಂತರ ಮಿಕ್ಸರ್ ನಲ್ಲಿ ಪುಡಿ ಮಾಡಿ. ತೆಂಗಿನಕಾಯಿ ತುರಿದು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ಒಮ್ಮೆ ಸೋಸಿ ಹಾಲನ್ನು ತೆಗೆಯಿರಿ, ಮತ್ತೊಮ್ಮೆ ನೀರು ಸೇರಿಸಿ ಹಾಲು ತೆಗೆಯಿರಿ. ಮೊದಲ ಬಾರಿ ತೆಗೆದ ಹಾಲನ್ನು ಕುದಿಸಿ ಮತ್ತು ಎರಡನೇ ಬಾರಿ ತೆಗೆದ ಹಾಲನ್ನೂ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅವಲಕ್ಕಿ, ತುಪ್ಪ ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ತಿರುಗಿಸಿ. ಎಲ್ಲಾ ಸೇರಿ ಗಟ್ಟಿಯಾದ ಮೇಲೆ ಒಲೆ ಆರಿಸಿ. ಇದಕ್ಕೆ ಬಾದಾಮಿ, ಗೋಡಂಬಿ, ಗಸಗಸೆ, ಏಲಕ್ಕಿ ಮತ್ತು ಲವಂಗ ಪುಡಿ ಮಾಡಿ ಸೇರಿಸಿ ಚೆನ್ನಾಗಿ ತಿರುಗಿಸಿ. ಒಂದು ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಅವಲಕ್ಕಿ ಹಲ್ವಾ ಹರಡಿ ಬೇಕಾದ ಆಕಾರದಲ್ಲಿ ಕತ್ತರಿಸಿ. ಈಗ ಅವಲಕ್ಕಿ ಹಲ್ವಾ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು