ಕವಿತೆ: ಬೊಬ್ಬಿರಿದರೇನು ಬಾಗ್ಯ
ಅಂಬರದಿ ತೊನೆ ತೊನೆದು
ಹನಿ ಹನಿಯಾಗಿ ಎಡೆಬಿಡದೆ
ಇಳೆಯ ಸೋಕಿ ಹರಿದು
ತೊರೆಯಾಗಿ ಜರಿಯಾಗಿ
ಹಳ್ಳಕೊಳ್ಳಗಳಾಗೆ
ಸೇರಿ ನದಿಯಾಗಿ ಹರಿದು
ಶರದಿಯ ಮೈತ್ರಿ ಹೊಂದೆ
ಮನವ ತಣಿವ ಆ ಜಲಬಲದ
ಆರ‍್ಬಟ ರೌದ್ರ ಮನೋಹರ
ರುದ್ರ ರಮಣೀಯ
ಶಾಂತವಾಗೆ ನಿನ್ನ ಹರಿವು
ಶುದ್ದೀಕರಿಸಿ ಪವಿತ್ರ ಬಂದವ
ಹೇರಿ ಚುಟುಕು ಚುಟುಕಾಗಿ
ಗುಟುಕು ಹರಿಸಿ ಮನೆ ಮನೆಯ
ಮನಗಳ ಜೊತೆಗೆ ತನುವ ತಣಿಸೆ
ನಿನ್ನ ಕರೆದರೆಲ್ಲರೂ ಜೀವ ಜಲ
ಬುವಿಯ ಬಿಸಿಲ ಬೇಗೆಗೆ
ಏರುವ ಕಾವಿಗೆ… ಮತ್ತೆ ಜಲ ಬತ್ತಿ
ಹೊಲ ಕಂತಿ ಮನುಜ ಬಾಯಾರೆ?
ಹನಿ ಹನಿ ನೀರಿಗೂ ಹಪಹಪಿಸಿ
ಪರಿತಪಿಸಿ ಒಣಗಿದ ಗಂಟಲಿಗೆ
ಹನಿ ನೀರು ಪಸೆಯಾಗೆ
ಬಾಯಾರಿಕೆ ಹಿಂಗಲಿಲ್ಲ
ಜಲ ತುಂಬಿ ಹರಿವಾಗ ನಿನ್ನ
ಜತನವ ಮಾಡಿ ಕೂಡಿಡುವ
ಬುದ್ದಿಗೆ ಗರ ಬಡಿದಿರಲು…?!
ನಿನ್ನ ಕೊರತೆಯಾದಾಗ
ಜಲ ಉಳಿಸಿ, ಮಿತವಾಗಿ ಬಳಸಿ
ಮನುಜ ಪ್ರಾಣಿ ಸಂಕುಲಗಳುಳಿಸಿ
ಈ ದರೆಯ ಉಳಿಸಿ ಎಂದು
ಬೊಬ್ಬಿರಿದರೇನು ಬಾಗ್ಯ
ಬೊಬ್ಬಿರಿದರೇನು ಬಾಗ್ಯ
(ಚಿತ್ರ ಸೆಲೆ: fairobserver.com)
ಒಳ್ಳೆಯ ಕವನ.
ಚೆನ್ನಾಗಿದೆ ಸರ್