ಕಾರೇಡಿ ಅಲಗು

– ನಿತಿನ್ ಗೌಡ

ಕಾರೇಡಿ

ಬೇಕಾಗುವ ಸಾಮಾನುಗಳು

  • ಕಾರೇಡಿ – 1/2 ಕಿಲೋ (ಕೊಂಬುಗಳನ್ನು ಬೇರ‍್ಪಡಿಸಿ)
  • ಈರುಳ್ಳಿ – 1
  • ಅರಿಶಿಣ – 1/2 ಚಮಚ
  • ಹಸಿ‌ ಮೆಣಸಿನ ಕಾಯಿ – 4
  • ಕಾಳುಮೆಣಸು ಪುಡಿ – ಕಾಲು ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು – 2 ಎಸಳು
  • ಕಾರದ ಪುಡಿ  –  ಅರ‍್ದ ಚಮಚ (ಇನ್ನೂ ಕಾರ ಬೇಕಾದಲ್ಲಿ ಮಾತ್ರ)
  • ಎಣ್ಣೆ – 2-3 ಚಮಚ
  • ಹುಣಸೆ ಹಣ್ಣು – ರುಚಿಗೆ ತಕ್ಕಶ್ಟು

ಮಾಡುವ ಬಗೆ:

ಮೊದಲಿಗೆ ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1 ಹೆಚ್ಚಿದ ಈರುಳ್ಳಿ ಮತ್ತು ಹಸಿ‌ ಮೆಣಸಿನ ಕಾಯಿಗಳನ್ನು ಸೇರಿಸಿ 2 ನಿಮಿಶ ನಡು ಉರಿಯಲ್ಲಿ ಹುರಿದುಕೊಳ್ಳಿ. ಜೊತೆಗೆ ಏಡಿಗಳನ್ನು (ಕೊಂಬುಗಳನ್ನು ಅಲಗಿಗೆ ಬಳಸಬೇಡಿ) ಸೋಸಿ ತೊಳೆದು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಈಗ ಏಡಿಗಳನ್ನು ಒಗ್ಗರಣೆಗೆ ಹಾಕಿ, ಉಪ್ಪು ಮತ್ತು ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿ ಹುರಿದು ಆಮೇಲೆ ಸ್ವಲ್ಪ ನೀರು ಹಾಕಿ 10-15 ನಿಮಿಶ ಬೇಯಿಸಿಕೊಳ್ಳಿ. ಈಗ ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಹುಣಸೆ ಹಣ್ಣಿನ ರಸ ಹಾಕಿ. ಮತ್ತಶ್ಟು ಕಾರ ಬೇಕಾದಲ್ಲಿ ಮಾತ್ರ ಸ್ವಲ್ಪ ಕಾರದ ಪುಡಿ ಹಾಕಿ 10 ನಿಮಿಶ ಬೇಯಿಸಿ ಇಳಿಸಿ. ಈಗ ಬಿಸಿ ಬಿಸಿ ಏಡಿ ಅಲಗು ತಯಾರಾಗಿದೆ. ಇದನ್ನು ಅನ್ನದ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: