ಕವಿತೆ: ಶ್ರೀರಾಮ

– ಶ್ಯಾಮಲಶ್ರೀ.ಕೆ.ಎಸ್.

ರಾಮ ರಾಮ ಜಯ ಜಯ ರಾಮ
ವಿಶ್ಣುವಿನ ಅವತಾರ ಶ್ರೀರಾಮ
ದಶರತ ಸುತ ದಶರತರಾಮ
ಕೌಸಲ್ಯ ಗರ‍್ಬ ಸಂಜಾತ ಕೌಸಲ್ಯರಾಮ

ರಗುಕುಲ ನಂದನ ರಗುರಾಮ
ಮೈತಿಲಿಯ ಮದನ ಸೀತಾರಾಮ
ಬ್ರಾತ್ರು ಲಕ್ಶ್ಮಣನು ಶ್ರೀರಾಮನ ಸಹಚರ
ಬಕ್ತ ಹನುಮಂತನು ಶ್ರೀರಾಮನ ಅನುಚರ

ಕುಲಸತಿಯ ಅಪಹರಿಸಿದ ರಾವಣನ ಮರ‍್ದಿಸಿ
ಅದರ‍್ಮವ ಮಣಿಸಿ
ದರ‍್ಮಶ್ರೇಶ್ಟತೆಯ ಉಳಿಸಿ
ಆದರ‍್ಶಮೂರ‍್ತಿಯಾದನು
ಮರ‍್ಯಾದ ಪುರುಶೋತ್ತಮನೆನಿಸಿ

ವರುಶಕ್ಕೊಮ್ಮೆ ಬಕ್ತರು ನೆರೆದು
ರಾಮನ ಪೂಜಿಪರು
ಬಕುತಿಯ ಸಿಂಚನವ ಎರೆದು
ರಾಮ ನಾಮವ ಜಪಿಸಿಹರು

ಗುಡಿಗೋಪುರ ಶುದ್ದಿಸಿ
ರಾಮನ ಬಜಿಸುತ ನೆನೆದಿಹರು
ಪಾನಕ, ಕೋಸಂಬರಿಯ ಸೇವಿಸಿ
ಶ್ರೀರಾಮನವಮಿಯ ಆಚರಿಸಿಹರು

(ಚಿತ್ರ ಸಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: